fusion ಪ್ಯೂಷನ್‍
ನಾಮವಾಚಕ
  1. ದ್ರವಣ; (ಶಾಖದಿಂದ) ಕರಗುವ ಯಾ ಕರಗಿಸುವುದು.
  2. ಕರಗಿದ ಮುದ್ದೆ.
  3. ಬೆಸುಗೆ; ಒಂದುಗೂಡಿಸಿಕೆ; ವಿವಿಧ ವಸ್ತುಗಳನ್ನು ಒಂದುಗೂಡಿಸುವುದು: a fusion of law and equity ನ್ಯಾಯ ಮತ್ತು ನೀತಿಗಳ ಬೆಸುಗೆ.
  4. ಒಕ್ಕೂಟ; ಸೇರುವೆ; ಮಿಳನ; ಐಕ್ಯ: fusion of parties ಪಕ್ಷಗಳ ಐಕ್ಯ.
  5. (ಭೌತವಿಜ್ಞಾನ) ಸಮ್ಮಿಳನ; ಹಗುರವಾದ ಪರಮಾಣು ಬೀಜಗಳು ಒಂದುಗೂಡಿ, ಸಾಮಾನ್ಯವಾಗಿ ಶಕ್ತಿಯನ್ನು ಬಿಡುಗಡೆ ಮಾಡುವುದರ ಜೊತೆಗೆ, ಭಾರವಾದ ಪರಮಾಣು ಬೀಜವಾಗುವುದು (ಉದಾಹರಣೆಗೆಅತ್ಯಧಿಕ ತಾಪದಲ್ಲಿ ಹೈಡ್ರೊಜನ್‍ ಬೀಜಗಳು ಒಂದುಗೂಡಿ ಹೀಲಿಯಂ ಬೀಜವಾಗುವುದು).
  6. (ಭೌತವಿಜ್ಞಾನ) ಶಕ್ತಿಯ ಆಕರವಾಗಿ ಈ ಬಗೆಯಲ್ಲಿ ಸಮ್ಮಿಳನವಾಗುವುದು.