See also 2fusillade
1fusillade ಪ್ಯೂಸಿಲೇಡ್‍
ನಾಮವಾಚಕ
  1. ಗುಂಡಿನ ಸುರಿಮಳೆ; ಎಡೆಬಿಡದ ಹಿರಂಗಿ ಹೊಡೆತ; ಸಂತತ ತುಪಾಕಿ ಹೊಡೆತ; ಎಡೆಬಿಡದೆ ಗುಂಡು ಹಾರಿಸುವುದು.
  2. ಸಾಮೂಹಿಕ ಹತ್ಯಾಕಾಂಡ; ಎಡೆಬಿಡದೆ ತುಪಾಕಿ ಹೊಡೆತದಿಂದ ಮಾಡುವ ಒಟ್ಟುಗಟ್ಟಲೆಯ ಮರಣದಂಡನೆ.
  3. (ಟೀಕೆ ಮೊದಲಾದವುಗಳ) ಸುರಿತ; ಪ್ರವಾಹ; ಸುರಿಮಳೆ: a fusillade of questions ಪ್ರಶ್ನೆಗಳ ಸುರಿಮಳೆ.
See also 1fusillade
2fusillade ಹ್ಯೂಸಿಲೇಡ್‍
ಸಕರ್ಮಕ ಕ್ರಿಯಾಪದ
  1. (ಸ್ಥಳವನ್ನು) ಗುಂಡಿನ ಸುರಿಮಳೆಯಿಂದ ದಾಳಿಮಾಡು, ಹಲ್ಲೆ ನಡೆಸು.
  2. (ಜನರನ್ನು) ಗುಂಡುಗರೆದು ಕೊಲ್ಲು; ಎಡೆಬಿಡದೆ (ಜನರ ಮೇಲೆ) ಫಿರಂಗಿ ಹಾರಿಸಿಕೊಲ್ಲು.