fury ಹ್ಯುಅರಿ
ನಾಮವಾಚಕ
  1. ರೋಷ; ಆವೇಶ; ರೋಷಾವೇಶ; ಹುಚ್ಚುಕೋಪ; ರೇಗು; ಕೋಪೋದ್ರೇಕ; ಕ್ರೋಧ: in a fury ರೋಷಾವೇಶದ ಭರದಲ್ಲಿ.
  2. (ಯುದ್ಧ ಮೊದಲಾದವಲ್ಲಿ) ಆವೇಶ; ಉದ್ರೇಕ; ಉರವಣಿ: in the fury of the battle ಯುದ್ಧದ ಉರವಣಿಯಲ್ಲಿ. poetic fury ಕಾವ್ಯದ ಆವೇಶ.
  3. (ಹವಾಮಾನ, ರೋಗ, ಮೊದಲಾದವುಗಳ) ತೀವ್ರತೆ; ರಭಸ; ಪ್ರಚಂಡತೆ; ಜೋರು; ಉಗ್ರತೆ; ವಿಷಮತೆ: the fury of the elements ಭಯಂಕರ ಬಿರುಗಾಳಿ ಮತ್ತು ಬಿರುಮಳೆ.
  4. (Fury) (ಸಾಮಾನ್ಯವಾಗಿ ಬಹುವಚನದಲ್ಲಿ) (ಗ್ರೀಕ್‍ ಪುರಾಣ) ರೌದ್ರದೇವತೆಯರು; ಸೇಡುಮಾರಿಯರು; ಪ್ರತೀಕಾರ ದೇವಿಯರು; ಪಾತಕದ ಶಿಕ್ಷೆಗಾಗಿ ಪಾತಾಳದಿಂದ ಕಳುಹಿಸುವ ಹಾವುಗೂದಲಿನ ಸ್ತ್ರೀದೇವತೆಗಳು: haunted by the furies of her father’s blood ಅವಳ ತಂದೆಯ ರಕ್ತಪಾತದ ಸೇಡನ್ನು ತೀರಿಸಿಕೊಳ್ಳುವ ಸೇಡುಮಾರಿಯರಿಂದ ಬೆನ್ನಟ್ಟಲ್ಪಟ್ಟು.
  5. (ಸಾಮಾನ್ಯವಾಗಿ ಬಹುವಚನದಲ್ಲಿ) (ರೂಪಕವಾಗಿ) ಸೇಡಿನ ಪಿಶಾಚಿಗಳು.
  6. (ಸಾಮಾನ್ಯವಾಗಿ ಬಹುವಚನದಲ್ಲಿ) ಪಶ್ಚಾತ್ತಾಪದ – ಬೇಗೆ, ಕುದಿ, ಸಂಕಟ.
  7. ಬಜಾರಿ; ಗಂಡುಬೀರಿ; ತಾಟಕಿ; ಕೆಡುಕಿ; ಕೋಪಿಷ್ಠೆ; ಸಿಟ್ಟಿನವಳು: sometimes she behaves like a vindictive fury ಕೆಲವುವೇಳೆ ಅವಳು ಸೇಡು ತೀರಿಸಿಕೊಳ್ಳುವ ತಾಟಕಿಯಂತೆ ವರ್ತಿಸುತ್ತಾಳೆ.
ಪದಗುಚ್ಛ
  1. like fury (ಆಡುಮಾತು)
    1. ಪ್ರಚಂಡವಾಗಿ; ಉಗ್ರವಾಗಿ; ರಭಸವಾಗಿ; ಹುಚ್ಚುಹುಚ್ಚಾಗಿ; ಭಯಂಕರವಾಗಿ: it rained like fury ಪ್ರಚಂಡವಾಗಿ ಮಳೆ ಸುರಿಯಿತು.
    2. ಬಹಳ ಕಷ್ಟಪಟ್ಟು; ಅತಿ ಶ್ರಮದಿಂದ.
  2. the Spanish Fury ಸ್ಪ್ಯಾನಿಷರ ರೌದ್ರಾವೇಶ; 1576ರಲ್ಲಿ ಸ್ಪ್ಯಾನಿಷರು ಆಂಟ್‍ವರ್ಪಿನಲ್ಲಿ ಮಾಡಿದ ಹತ್ಯಾಕಾಂಡ.