See also 2further  3further
1further ಹರ್ದರ್‍
ಕ್ರಿಯಾವಿಶೇಷಣ

(far ಎಂಬುದರ ತರ ರೂಪವಾಗಿ ಪ್ರಯೋಗ)

  1. (ಸ್ಥಳದಲ್ಲಿ, ಕಾಲದಲ್ಲಿ) ಮುಂದಕ್ಕೆ; ಇನ್ನೂ ಮುಂದೆ: unsafe to proceed further ಇನ್ನು ಮುಂದಕ್ಕೆ ಹೋಗುವುದು ಕ್ಷೇಮವಲ್ಲ.
  2. ಇನ್ನೂ; ಇನ್ನೂ ಹೆಚ್ಚಾಗಿ; ಮತ್ತಷ್ಟು: inquire further ಇನ್ನೂ ಹೆಚ್ಚಾಗಿ ವಿವರಣೆ ಕೇಳು.
  3. (ಮುಖ್ಯವಾಗಿ ವಾದದಲ್ಲಿ ಹೊಸ ವಿಚಾರವನ್ನು ಮಂಡಿಸುವಾಗ) ಇದಲ್ಲದೆ; ಜೊತೆಗೆ; ಮೇಲಾಗಿ; ಮತ್ತೂ; ಇಷ್ಟೇ ಅಲ್ಲದೆ.
  4. ಅದಕ್ಕಿಂತಲೂ ದೂರದಲ್ಲಿ; ಇನ್ನಷ್ಟು ದೂರದಲ್ಲಿ; ಮತ್ತಷ್ಟು ದೂರವಾಗಿ: nothing was further from his thoughts ಅವನ ಮನಸ್ಸಿನಲ್ಲಿ ಬೇರಾವುದೂ ಅದಕ್ಕಿಂತ ದೂರವಾಗಿರಲಿಲ್ಲ.
  5. (ಸೌಮ್ಯೋಕ್ತಿ) ನರಕದಲ್ಲಿ.
See also 1further  3further
2further ಹರ್ದರ್‍
ಗುಣವಾಚಕ

(far ಎಂಬುದರ ತರ ರೂಪವಾಗಿ ಪ್ರಯೋಗ)

  1. (ಈಗಿರುವುದಕ್ಕಿಂತ ಈಗ ಮಾಡಿರುವುದಕ್ಕಿಂತ) ಹೆಚ್ಚಿನ; ಅಧಿಕ; ಇನ್ನೂ ಮುಂದಕ್ಕೆ ಹೋಗುವ: threats of punishment ಇನ್ನೂ ಹೆಚ್ಚಿನ ಶಿಕ್ಷೆಯ ಬೆದರಿಕೆಗಳು: till further notice or orders (ಅದುವರೆಗೆ ಹಾಲಿ ಇರುವ ಏರ್ಪಾಡು ಮುಂದುವರಿಯುವುದೆಂದು ಪ್ರಕಟಿಸುವಾಗ) ಮುಂದೆ ಇನ್ನೊಂದು ತಿಳಿವಳಿಕೆ ಯಾ ಆಜ್ಞೆ ಕೊಡುವವರೆಗೂ.
  2. ಹೆಚ್ಚುದೂರದ; ಆಚೆಯ: on the further side ಆಚೆಯ ಕಡೆ; ದೂರದ ಕಡೆ.
ಪದಗುಚ್ಛ

further education (ಬ್ರಿಟಿಷ್‍ ಪ್ರಯೋಗ) ಮುಂದುವರೆದ ಶಿಕ್ಷಣ; ಉನ್ನತ ಶಿಕ್ಷಣ; ಶಾಲಾವಯಸ್ಸನ್ನು ಈರಿದವರಿಗೆ ಕೊಡುವ, ಮುಖ್ಯವಾಗಿ ವಿಶ್ವವಿದ್ಯಾನಿಲಯದ, ಶಿಕ್ಷಣ.

See also 1further  2further
3further ಹರ್ದರ್‍
ಸಕರ್ಮಕ ಕ್ರಿಯಾಪದ

(ಕೈಕೊಂಡ ಕೆಲಸ, ಚಳವಳಿ, ಧ್ಯೇಯಗಳ ವಿಷಯದಲ್ಲಿ) ಸಹಾಯಮಾಡು; ನೆರವಾಗು; ಮುಂದುವರಿಸು; ಉತ್ತೇಜನಕೊಡು; ಪ್ರೋತ್ಸಾಹಿಸು; ಅನುಕೂಲಮಾಡು; ಬೆಂಬಲಿಸು; further the cause of peace ಶಾಂತಿಯ ಧ್ಯೇಯಕ್ಕೆ ನೆರವಾಗು.