furniture ಹರ್ನಿಚರ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) ಒಳವಸ್ತು; ಒಳಗೆ ಅಡಕವಾಗಿರುವ ವಸ್ತು, ವಿಷಯ: furniture of his pocket ಅವನ (ಜೇಬಿನಲ್ಲಿರುವ) ಹಣ, ದುಡ್ಡು. furniture of my shelves ನನ್ನ ಬಡುಗಳಲ್ಲಿರುವ ಪುಸ್ತಕಗಳು. furniture of one’s mind ಒಬ್ಬನ ಜ್ಞಾನ ಮತ್ತು ಬುದ್ಧಿಶಕ್ತಿ.
  2. (ಪ್ರಾಚೀನ ಪ್ರಯೋಗ) ಕುದುರೆ ಮೊದಲಾದವುಗಳ ಸಜ್ಜು, ಸರಂಜಾಮು, ಮೊದಲಾದವು.
  3. (ಮನೆಯ ಯಾ ಕೋಣೆಯ) (ಅಚ್ಚುಮೊಳೆಗಳ ಸುತ್ತ ಯಾ ಮಧ್ಯೆ ಜಾಗ ಬಿಡಲು ಮತ್ತು ಛಾಪದ ಚೌಕಟ್ಟಿನಲ್ಲಿ ಮುದ್ರಣ ವಸ್ತುವನ್ನು ಬಿಗಿಯಾಗಿಡಲು ಬಳಸುವ) ಮರದ ಯಾ ಲೋಹದ ತುಂಡುಗಳು, ಚೂರುಗಳು.
  4. (ನೌಕಾಯಾನ) ಹಡಗಿನ ಉಪಕರಣಗಳು, ಮುಖ್ಯವಾಗಿ ಕಪ್ಪಿಯೆತ್ತಿಗೆ; ಹಗ್ಗ ಕೊಕ್ಕೆಗಳಿಂದ ಕೂಡಿದ ಉರುಳುರಾಟೆ ಮೊದಲಾದವು.
  5. ಪರಿಕರ ಸಾಮಗ್ರಿ; ಉಪಸಾಮಗ್ರಿ; ಬಾಗಿಲಿನ ಹಿಡಿ ಮತ್ತು ಬೀಗಗಳು.