furl ಹರ್ಲ್‍
ಸಕರ್ಮಕ ಕ್ರಿಯಾಪದ
  1. (ಹಡಗಿನ ಪಟವನ್ನು ಅದರ ದಿಮ್ಮಿಗೆ, ಬಾವುಟವನ್ನು ಅದರ ದಂಡಕ್ಕೆ) ಸುತ್ತಿ – ಬಿಗಿ ಕಟ್ಟು.
  2. (ಬೀಸಣಿಗೆ, ಕೊಡೆ, ಪರದೆ, ಮೊದಲಾದವನ್ನು) ಮಡಿಸು; ಮುಚ್ಚು; ಮುದುರು; ಸುತ್ತು; ಕಟ್ಟಿಡು.
  3. (ರೆಕ್ಕೆಗಳನ್ನು) ಮುದುರು; ಮಡಿಸು.
  4. (ಆಸೆ, ಆಕಾಂಕ್ಷೆಗಳನ್ನು) ತ್ಯಜಿಸು; ಕೈಬಿಡು; ಬಿಟ್ಟುಬಿಡು: ತೊರೆ; ವರ್ಜಿಸು.
ಅಕರ್ಮಕ ಕ್ರಿಯಾಪದ
  1. (ಹಡಗಿನ ಪಟ ಅದರ ದಿಮ್ಮಿಗೆ, ಬಾವುಟ ಅದರ ದಂಡಕ್ಕೆ) ಸುರುಳಿ ಸುತ್ತಿಕೊ.
  2. (ಬೀಸಣಿಗೆ, ಕೊಡೆ, ಪರದೆ, ಮೊದಲಾದವುಗಳ ವಿಷಯದಲ್ಲಿ) ಮಡಿಸಿಕೊಳ್ಳು; ಮುಚ್ಚಿಕೊಳ್ಳು; ಮುದುರಿಕೊಳ್ಳು; ಸುತ್ತಿಕೊಳ್ಳು.
  3. (ರೆಕ್ಕೆಗಳು) ಮುದುರಿಕೊ; ಮಡಿಸಿಕೊಳ್ಳು.
  4. (ಆಸೆ, ಆಕಾಂಕ್ಷೆಗಳು) ತ್ಯಕ್ತವಾಗು; ವರ್ಜಿತವಾಗು; ಕುಸಿದುಬೀಳು.
  5. (ಮೋಡಗಳಂತೆ) ಸರಿದುಹೋಗು; ಉರುಳಿಹೋಗು: years of misery and sin furl off ಸಂಕಟ ಮತ್ತು ಪಾಪಗಳಿಂದ ಕೂಡಿದ ವರ್ಷಗಳು ಉರುಳಿಹೋಗುವುವು.