furbish ಹರ್ಬಿಷ್‍
ಸಕರ್ಮಕ ಕ್ರಿಯಾಪದ
  1. ತುಕ್ಕು – ತೆಗೆ, ಕಳೆ; (ಉಜ್ಜಿ) ಹೊಳಪುಕೊಡು; ಒಪ್ಪಹಾಕು; ಒಪ್ಪವಿಡು; ಹೊಳೆಯಿಸು; ಬೆಳಗಿಸು; ಮೆರಗುಕೊಡು: old arms duly furbished ಸರಿಯಾಗಿ ಹೊಳಪುಕೊಟ್ಟ ಹಳೆಯ ಆಯುಧಗಳು.
  2. ಜೀರ್ಣೋದ್ಧಾರಮಾಡು; (ಯಾವುದೇ ಪುರಾತನವಾದುದಕ್ಕೆ) ಹೊಸರೂಪ ಕೊಡು; ಹೊಸ ಕಳೆ ಕೊಡು; ಹೊಸದುಮಾಡು; ನವೀಕರಿಸು; ಹೊಸ ಚೈತನ್ಯಕೊಡು; ಪುನರುಜ್ಜೀವನಗೊಳಿಸು: we should furbish up the maxims of old copybooks ಹಳೆಯ ಕಾಪಿಪುಸ್ತಕದ ಸೂಕ್ತಿಗಳಿಗೆ ಹೊಸ ರೂಪ ಕೊಡಬೇಕು.