See also 2fund
1fund ಹಂಡ್‍
ನಾಮವಾಚಕ
  1. ನಿಧಿ; ಸಂಗ್ರಹ; ರಾಶಿ; ಸಮೃದ್ಧಿ: a fund of commonsense ವ್ಯವಹಾರಜ್ಞಾನದ ನಿಧಿ. a fund of tenderness ಕರುಣಾನಿಧಿ; ದಯಾನಿಧಿ. a fund of knowledge ಜ್ಞಾನನಿಧಿ.
  2. (ಮುಖ್ಯವಾಗಿ ಒಂದು ಉದ್ದೇಶಕ್ಕಾಗಿ ಈಸಲಿಟ್ಟ) ನಿಧಿ; ಪುದುವಟ್ಟು; ಇಡುಗಂಟು: sinking fund ಸಾಲತೀರುವೆಯ ನಿಧಿ; ಋಣ ಪರಿಹಾರ ನಿಧಿ.
  3. (ಬಹುವಚನದಲ್ಲಿ) ದ್ರವ್ಯಸಂಪತ್ತು; ಹಣ; ಬಂಡವಾಳ: in funds ಹಣವಿರುವ; ಯಥೇಷ್ಟ ದ್ರವ್ಯಸಂಪತ್ತಿರುವ.
ಪದಗುಚ್ಛ

the funds (ಬ್ರಿಟಿಷ್‍ ಪ್ರಯೋಗ) (ಒಂದೇ ರೀತಿಯ ಬಂಡವಾಳವಾಗಿ ಉಪಯೋಗಿಸುವ) ರಾಷ್ಟ್ರಸಾಲ; ರಾಷ್ಟ್ರೀಯ ಸಾಲ: he has two lakhs of rupees in the funds ರಾಷ್ಟ್ರಸಾಲದಲ್ಲಿ ಎರಡು ಲಕ್ಷ ರೂಪಾಯಿಗಳನ್ನು ಇಟ್ಟಿದ್ದಾನೆ.

See also 1fund
2fund ಹಂಡ್‍
ಸಕರ್ಮಕ ಕ್ರಿಯಾಪದ
  1. ಚಾಲ್ತಿಸಾಲವನ್ನು (ಕ್ಲುಪ್ತ ಬಡ್ಡಿಯ ದರದ ಮೇಲೆ) ಹೆಚ್ಚು ಕಡಮೆ ಕಾಯಂ ಸಾಲವಾಗಿ ಪರಿವರ್ತಿಸು.
  2. ನಿಧಿಗೆ ಹಾಕು.
  3. (ವಿರಳ ಪ್ರಯೋಗ) ಸಂಗ್ರಹಿಸು; ಸೇರಿಸು; ಶೇಖರಿಸು; ಕೂಡುಹಾಕು.
  4. ಸರ್ಕಾರದ ಸಾಲಪತ್ರಗಳಲ್ಲಿ ಹಣ – ಹಾಕು, ಇಡು.
  5. (ಯೋಜನೆ ಮೊದಲಾದವುಗಳಿಗೆ) ಹಣ ಒದಗಿಸು; ಬಂಡವಾಳ ಒದಗಿಸು.