functionally ಹಂಕ್‍ಷನಲಿ
ಕ್ರಿಯಾವಿಶೇಷಣ
  1. ಕಾರ್ಯಗಳಿಗೆ, ಕ್ರಿಯೆಗಳಿಗೆ – ಸಂಬಂಧಪಟ್ಟಂತೆ.
  2. ಕ್ರಿಯೆಗಳ ನೆರವೇರಿಕೆಯಲ್ಲಿ; ಕಾರ್ಯಗಳ ನಿರ್ವಹಣೆಯಲ್ಲಿ; ಕಾರ್ಯತಃ.
  3. (ಕಟ್ಟಡ ಮೊದಲಾದವುಗಳ ವಿಷಯದಲ್ಲಿ) ಕಾರ್ಯಾರ್ಥವಾಗಿ; ಉಪಯುಕ್ತವಾಗಿ; ಪ್ರಯೋಜನಾತ್ಮಕವಾಗಿ; ಕಾರ್ಯಕ್ಕೆ ಅನುಗುಣವಾಗಿ; ಕೇವಲ ಕೆಲಸದ ದೃಷ್ಟಿಯಿಂದ ರೂಪಿಸಿದಂತೆ ಯಾ ನಿರ್ಮಿಸಿದಂತೆ; ಉಪಯೋಗದೃಷ್ಟಿಯಿಂದ.
  4. (ಶರೀರ ವಿಜ್ಞಾನ)
    1. ಅಂಗ ಮೊದಲಾದವುಗಳ (ರೂಪಕ್ಕೆ ಯಾ ರಚನಾವಿನ್ಯಾಸಕ್ಕೆ ಸಂಬಂಧಿಸಿರದೆ) ಕ್ರಿಯೆಗಳಿಗೆ ಸಂಬಂಧಪಟ್ಟಂತೆ.
    2. (ಅಂಗದ ವಿಷಯದಲ್ಲಿ) ಸಕ್ರಿಯವಾಗಿ; ಕ್ರಿಯಾವಿಶಿಷ್ಟವಾಗಿ; ಕ್ರಿಯೆಯಿರುವಂತೆ; ಕೆಲಸ ಮಾಡುವ ರೀತಿಯಲ್ಲಿ.
  5. (ಮನಶ್ಶಾಸ್ತ್ರ) (ಮಾನಸಿಕ ರೋಗದ ವಿಷಯದಲ್ಲಿ) ಕಾರ್ಯಿಕವಾಗಿ; ಆಂಗಿಕವಾಗಿರದೆ; ಅಂಗದ ಸ್ವರೂಪ ಯಾ ರಚನೆಯ ದೋಷದಿಂದ ಜನಿಸದೆ, ಅದರ ಕಾರ್ಯದೋಷದಿಂದ ಜನಿಸಿ.