functional ಹಂಕ್‍ಷನಲ್‍
ಗುಣವಾಚಕ
  1. ಅಧಿಕಾರ ಸಂಬಂಧದ; ಆಧಿಕಾರಿಕ; ಅಧಿಕೃತ.
  2. ಕೇವಲ ಔಪಚಾರಿಕ; ಆಚಾರಾರ್ಥಕ.
  3. (ಶರೀರ ವಿಜ್ಞಾನ)(ಮುಖ್ಯವಾಗಿ ವ್ಯಾಧಿಯ ವಿಷಯದಲ್ಲಿ) ಕ್ರಿಯೆಯ ಯಾ ಕ್ರಿಯಾ ಸಂಬಂಧಿ; ಅಂಗ ಮೊದಲಾದವುಗಳ ಸ್ವರೂಪಕ್ಕೆ ಯಾ ರಚನಾವಿನ್ಯಾಸಕ್ಕೆ ಸಂಬಂಧಿಸಿರದೆ ಅವುಗಳ ಕ್ರಿಯೆಯ, ಕಾರ್ಯಾಚರಣೆಯ, ಯಾ ಕ್ರಿಯೆಗೆ, ಕಾರ್ಯಾಚರಣೆಗೆ ಮಾತ್ರ ಸಂಬಂಧಪಟ್ಟ.
  4. (ಮನಶ್ಶಾಸ್ತ್ರ) (ಮಾನಸಿಕ ರೋಗದ ವಿಷಯದಲ್ಲಿ) ಆಂಗಿಕವಲ್ಲದ; ಕ್ರಿಯಾತ್ಮಕ; ಕಾರ್ಯಿಕ; ಸ್ಪಷ್ಟವಾಗಿ ಯಾವುದೇ ಅಂಗದ ಕಾರಣದಿಂದ ಯಾ ಅಂಗರಚನೆಯ ವ್ಯತ್ಯಾಸದಿಂದ ಜನಿಸಿರದ ದೇಹದ ಅವಯವ ಒಂದು ಸ್ವರೂಪತಃ ನಿರ್ದುಷ್ಟವಾಗಿದ್ದರೂ ತಾನು ನಿರ್ವಹಿಸಬೇಕಾದ ಕೆಲಸವನ್ನು ಮಾಡದಿರುವುದರಿಂದ ಜನಿಸಿದ.
  5. (ಅಂಗದ ವಿಷಯದಲ್ಲಿ) ನಿರ್ದಿಷ್ಟಕ್ರಿಯೆಯ; ನಿಯಮಿತ ಕಾರ್ಯದ; ಕಾರ್ಯರಹಿತವಾಗಿರದ ಯಾ ಅಪೂರ್ಣ ಬೆಳವಣಿಗೆಯದಾಗಿರದ.
  6. (ಗಣಿತ) ಫಲನದ; ಉತ್ಪನ್ನದ.
  7. (ಕಟ್ಟಡ, ಪೀಠೋಪಕರಣ, ಮೊದಲಾದವುಗಳ ವಿಷಯದಲ್ಲಿ) (ವಿನ್ಯಾಸದ ಬಗ್ಗೆ ಯಾವುದೇ ಸಾಂಪ್ರದಾಯಿಕ ಯಾ ಇತರ ತತ್ತ್ವಗಳ ಆಧಾರದ ಮೇಲೆ ಆಗಿರದೆ) ಕಾರ್ಯಸಾಧಕ; ಕಾರ್ಯಾರ್ಥಕ; ಕಾರ್ಯಾನುಗುಣ; ಕಾರ್ಯಾನುರೂಪ; ಉದ್ದೇಶಾರ್ಥಕ; ಪ್ರಯೋಜಕ; ಉದ್ದೇಶಸಾಧಕ; ನಿರ್ವಹಿಸಬೇಕಾದ ಕ್ರಿಯೆಯ ದೃಷ್ಟಿಯಿಂದಲೇ ನಿರ್ಮಿಸಿದ.
  8. ಕೆಲಸ ಮಾಡಬಲ್ಲ; ಕಾರ್ಯಸಮರ್ಥ; ಕಾರ್ಯಕಾರಿ; ಕಾರ್ಯ ನಡೆಸಬಲ್ಲ: when will the ventilating system be functional again? ಗಾಳಿಯಾಡಿಸುವ ವ್ಯವಸ್ಥೆ ಮತ್ತೆ ಯಾವಾಗ ಕೆಲಸ ಮಾಡಬಲ್ಲದು?
  9. ಪ್ರಾಯೋಗಿಕ; ಕಾರ್ಯಕಾರಿ; ಕಾರ್ಯಾತ್ಮಕ.
  10. ಉಪಯೋಗಕರ; ಉಪಯುಕ್ತ; ಪ್ರಯೋಜನಾತ್ಮಕ.