See also 2function
1function ಹಂಕ್‍ಷನ್‍
ನಾಮವಾಚಕ
  1. (ಯಾವುದೇ ಒಂದರ ಸ್ವಾಭಾವಿಕ) ಕ್ರಿಯೆ; ಕೆಲಸ; ಕಾರ್ಯಭಾರ; ಚಟುವಟಿಕೆ.
  2. ಕಾರ್ಯವಿಧಾನ; ಕಾರ್ಯಾಚರಣೆ; ಯಾವುದೇ ಒಂದು ತನ್ನ ಉದ್ದೇಶ ಯಾ ಗುರಿಯನ್ನು ಸಾಧಿಸುವ ಕಾರ್ಯದ, ಕಾರ್ಯ ಚಟುವಟಿಕೆಯ ರೀತಿ.
  3. (ಅಧಿಕಾರಿಯ) ಕರ್ತವ್ಯ; ಕೆಲಸ; ಉದ್ಯೋಗ; ಹುದ್ದೆ; ವೃತ್ತಿ; ಕಸುಬು.
  4. (ಧಾರ್ಮಿಕ, ಸಾಮಾಜಿಕ ಯಾ ಇತರ ಸಾರ್ವಜನಿಕ) ಉತ್ಸವ; ಸಮಾರಂಭ; ನಡಾವಳಿ; ಸಭೆ; ಕೂಟ.
  5. (ಗಣಿತ) ಫಲನ; ಉತ್ಪನ್ನ; ಯಾವುದೇ ಪರಿಮಾಣದ ಬೆಲೆಯನ್ನವಲಂಬಿಸಿದ ಬೆಲೆಯುಳ್ಳ ಇನ್ನೊಂದು ಚರಪರಿಮಾಣ.
  6. ಫಲ; ಪರಿಣಾಮ; ಅನುಗತಾಂಶ; ಸಂಬಂಧಪಟ್ಟ ಯಾ ಉಳಿದ ಅಂಶಗಳನ್ನು ಅವಲಂಬಿಸಿರುವ – ಅಂಶ, ವಿಷಯ, ಸಂಗತಿ: price is a function of supply and demand ಬೆಲೆಯು ಬೇಡಿಕೆ ಪೂರೈಕೆಗಳನ್ನು ಅವಲಂಬಿಸಿರುವ ಅಂಶ.
  7. (ಕಂಪ್ಯೂಟರಿನಲ್ಲಿ) ಕೆಲಸ; ಕಾರ್ಯ; ಯಾವುದೇ ಮೂಲ ಕಾರ್ಯ ನಿರ್ವಹಣೆ.
See also 1function
2function ಹಂಕ್‍ಷನ್‍
ಅಕರ್ಮಕ ಕ್ರಿಯಾಪದ

ಕ್ರಿಯೆ ನಡೆಸು; ಕೆಲಸಮಾಡು; ಕಾರ್ಯ ನೆರವೇರಿಸು; ಉದ್ದೇಶ ಸಾಧನೆ ಮಾಡು: the battery doesn’t function ಬ್ಯಾಟರಿಯು ಕೆಲಸ ಮಾಡುವುದಿಲ್ಲ.