See also 2fun
1fun ಹನ್‍
ನಾಮವಾಚಕ
  1. ಹುಡುಗಾಟ; ಚೆಲ್ಲಾಟ; ತಮಾಷೆ; ವಿನೋದ; ಹಾಸ್ಯ; ಪರಿಹಾಸ; ಚೇಷ್ಟೆ; ಕುಚೇಷ್ಟೆ; ಕುಚೋದ್ಯ; ಗೇಲಿ; ನಕಲಿ; ಮೋಜು.
  2. ತಮಾಷೆ; ವಿನೋದ ನೀಡುವಂಥದ್ದು: your new friend is great fun ನಿನ್ನ ಹೊಸ ಸ್ನೇಹಿತ ಬಹಳ ತಮಾಷೆಯವನು. riding is good fun ಕುದುರೆ ಸವಾರಿ ಬಹಳ ಮೋಜಿನದು.
  3. (ಆಡುಮಾತು) ಪ್ರಣಯದ ಚೆಲ್ಲಾಟ.
ಪದಗುಚ್ಛ
  1. for fun ತಮಾಷೆಗಾಗಿ; ವಿನೋದಕ್ಕಾಗಿ.
  2. fun and games ಹುಡುಗಾಟಿಕೆಗಳು; ಉಲ್ಲಾಸಪೂರ್ಣವಾದ ಯಾ ತಮಾಷೆಯ ಚಟುವಟಿಕೆಗಳು, ಆಟಪಾಟಗಳು.
  3. good (or great) fun ಒಳ್ಳೆಯ ವಿನೋದ; ಭಾರಿ ಮೋಜು, ತಮಾಷೆ.
  4. have fun
    1. ಮಜಾಮಾಡು; ಸಂತೋಷಪಡು.
    2. ಸಂಭೋಗದಲ್ಲಿ ತೊಡಗು; ಸಂಭೋಗಿಸು.
  5. in fun = ಪದಗುಚ್ಛ \((1)\).
  6. like fun
    1. ಚುರುಕಾಗಿ; ಚಟುವಟಿಕೆಯಿಂದ.
    2. ಬೇಗನೆ; ಶೀಘ್ರವಾಗಿ.
    3. ಭಾರಿಯಾಗಿ; ತುಂಬಾ; ಹೆಚ್ಚಾಗಿ; ಬಹಳ.
    4. (ಹಾಸ್ಯವ್ಯಂಗ್ಯವಾಗಿ) ಖಂಡಿತ ಇಲ್ಲ; ಬಿಲ್‍ಕುಲ್‍ ಇಲ್ಲ.
  7. make fun ತಮಾಷೆ ಮಾಡು; ಗೇಲಿಮಾಡು; ಹಾಸ್ಯಮಾಡು.
  8. poke fun at = ಪದಗುಚ್ಛ \((7)\).
  9. what fun! ಎಂಥ ವಿನೋದ! ಎಂಥ ಮಜಾ!
See also 1fun
2fun ಹನ್‍
ಗುಣವಾಚಕ
  1. ತಮಾಷೆಯ; ಮೋಜಿನ; ವಿನೋದಕರ.
  2. ಸಂತೋಷದ; ಖುಷಿಯ; ಸಂತೋಷದಾಯಕ: I was remembering Divya and the fun times we have had ನಾನು ದಿವ್ಯಳನ್ನೂ, ಅವಳೊಡನೆ ಕಳೆದ ಸಂತೋಷದ ಸಮಯಗಳನ್ನೂ ಜ್ಞಾಪಿಸಿಕೊಳ್ಳುತ್ತಿದ್ದೆ.