fumigate ಹ್ಯೂಮಿಗೇಟ್‍
ಸಕರ್ಮಕ ಕ್ರಿಯಾಪದ
  1. ಹೊಗೆ ಹಾಯಿಸು; ಹೊಗೆಯಾಡಿಸು; ಹೊಗೆ ಹಾಕು; ಹಬೆ ಬಿಡು; ಹಬೆಗೆ ಒಡ್ಡು.
  2. ಧೂಪ ಹಾಕು; ಧೂಪಿಸು; ಧೂಪದಿಂದ – ಪರಿಮಳಗೊಳಿಸು, ಸುವಾಸನೆಯನ್ನುಂಟುಮಾಡು.
  3. ಹೊಗೆಯಿಂದ ಸೋಂಕು ಕಳೆ; ಧೂಮದಿಂದ, ಹೊಗೆಯಿಂದ, ಹಬೆಯಿಂದ – ರೋಗಕಾರಕ ಕ್ರಿಮಿಗಳನ್ನು ನಾಶಮಾಡು.
  4. ಹಬೆಯಿಂದ ಶುದ್ಧಿಗೊಳಿಸು.