fulsome ಹುಲ್‍ಸಮ್‍
ಗುಣವಾಚಕ

(ಹೊಗಳಿಕೆ, ದಾಸ್ಯ ಭಾವ, ತೋರ್ಕೆಯ ಪ್ರೀತಿ – ಇವುಗಳ ವಿಷಯದಲ್ಲಿ) ಬೇಸರ ಹಿಡಿಸುವ; ವಿಪರೀತ(ವಾದ); ಅತಿಯಾದ; ತೀರ ಹೆಚ್ಚಾದ; ಅಸಹ್ಯ ಹುಟ್ಟಿಸುವ: fulsome praise ಅತಿಪ್ರಶಂಸೆ; ವಿಪರೀತ ಹೊಗಳಿಕೆ. fulsome language ಅತಿಯೆಂದೆನಿಸುವ ಭಾಷೆ. fulsome mounds of greasy foods ಓಕರಿಕೆ ಬರಿಸುವ ರಾಶಿರಾಶಿ ಜಿಡ್ಡಿನ ತಿಂಡಿಗಳು.