See also 2fulminate
1fulminate ಹಲ್ಮಿನೇಟ್‍
ಸಕರ್ಮಕ ಕ್ರಿಯಾಪದ
  1. ಸಿಡಿಸು; ಸ್ಫೋಟಿಸು.
  2. (ಖಂಡನೆಯನ್ನು) ಪ್ರಕಟಿಸು ಯಾ ಹೊರಡಿಸು.
ಅಕರ್ಮಕ ಕ್ರಿಯಾಪದ
  1. ಮಿಂಚಿನಂತೆ ಹೊಳೆ.
  2. ಸಿಡಿ; ಸ್ಫೋಟಿಸು; ಸ್ಫೋಟಗೊಳ್ಳು; ಸ್ಫೋಟನವಾಗು: fulminating gold, mercury, etc. ಸ್ಫೋಟಕ ಚಿನ್ನ, ಪಾದರಸ, ಮೊದಲಾದ ಅನೇಕ ಬಗೆಯ ಸ್ಫೋಟಕಗಳು.
  3. ಕಟುವಾಗಿ ಖಂಡಿಸು; ಗುಡುಗು; ಗರ್ಜಿಸು; ಆರ್ಭಟಿಸು; ಅಬ್ಬರಿಸು: the minister fulminated against legalized vice ಮಂತ್ರಿಯು ಕಾನೂನುಬದ್ಧಗೊಳಿಸಿದ ದುರಾಚಾರದ ವಿರುದ್ಧ ಗುಡುಗಿದ.
  4. ಖಂಡನೆಗಳನ್ನು ಪ್ರಕಟಿಸು ಯಾ ಹೊರಡಿಸು.
  5. (ರೋಗಶಾಸ್ತ್ರ) (ವ್ಯಾಧಿಗಳ ವಿಷಯದಲ್ಲಿ) ಥಟ್ಟನೆ ಹೊಮ್ಮು; ಇದ್ದಕ್ಕಿದ್ದಹಾಗೆ ಬೆಳೆ.
See also 1fulminate
2fulminate ಹಲ್ಮಿನೇಟ್‍
ನಾಮವಾಚಕ

(ರಸಾಯನವಿಜ್ಞಾನ) ಹಲ್ಮಿನೇಟು; ಹಲ್ಮಿನಿಕ್‍ ಆಮ್ಲದ ಯಾವುದೇ ಲವಣ.