fulfilment ಹುಲ್‍ಹಿಲ್‍ಮಂಟ್‍
ನಾಮವಾಚಕ
  1. ನೆರವೇರಿಕೆ; ಪೂರಯಿಸಿಕೆ; ಸಾಂಗಗೊಳಿಸಿಕೆ.
  2. (ಭವಿಷ್ಯನುಡಿಯ) ಕೈಗೂಡಿಸಿಕೆ; ಈಡೇರಿಸುವಿಕೆ.
  3. (ಆಸೆಯ, ಪ್ರಾರ್ಥನೆಯ) ನೆರವೇರಿಸಿಕೆ; ಪೂರೈಕೆ; ನಡೆಸಿಕೊಡುವಿಕೆ.
  4. (ಆಜ್ಞೆಯ, ಕಾನೂನಿನ) ಪಾಲನೆ; ನೆರವೇರಿಕೆ; ಕಾರ್ಯರೂಪಕ್ಕೆ ತರುವಿಕೆ.
  5. (ಉದ್ದೇಶಕ್ಕೆ) ಸರಿ ಹೊಂದುವಿಕೆ; ಅನುಗುಣವಾಗಿರುವಿಕೆ.
  6. (ನಿಯಮಗಳ) ನೆರವೇರಿಕೆ; ಪಾಲನೆ; ಅನುಸರಣೆ.
  7. (ಕಾಲಾವಧಿಯ, ಕೆಲಸದ) ಮುಗಿತ; ಕೊನೆ ಮುಟ್ಟಿಸುವುದು; ಪೂರ್ತಿಮಾಡುವುದು; ಮುಕ್ತಾಯ; ಸಮಾಪ್ತಿ.
  8. ಪೂರ್ಣವಿಕಾಸ; ಸಾಧ್ಯತೆಗಳ ಪೂರ್ಣಸಿದ್ಧಿ; ಪೂರ್ಣ ಅಭಿವೃದ್ಧಿ; ಸಾರ್ಥಕತೆ.
  9. ನೆರವೇರಿಕೆ; ಸಾಧನೆ; ಸಿದ್ಧಿ; ನಿರ್ವಾಹ; ನಿರ್ವಹಣೆ; ನನಸಾಗುವಿಕೆ; ಕೊನೆಮುಟ್ಟುವಿಕೆ.