fulfil ಹುಲ್‍ಹಿಲ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ fulfilled, ವರ್ತಮಾನ ಕೃದಂತ fulfilling).
  1. ನೆರವೇರಿಸು; ಪೂರಯಿಸು; ಸಾಂಗಗೊಳಿಸು; ಸಾಂಗಮಾಡು.
  2. (ಭವಿಷ್ಯನುಡಿ, ವಾಗ್ದಾನವನ್ನು) ಸಫಲಗೊಳಿಸು; ಕೈಗೂಡಿಸು; ಈಡೇರಿಸು.
  3. (ಆಸೆ, ಪ್ರಾರ್ಥನೆ) ತೀರಿಸು; ನೆರವೇರಿಸು; ಈಡೇರಿಸು; ನಡೆಸಿಕೊಡು.
  4. (ಆಜ್ಞೆ, ಕಾನೂನು) ಪಾಲಿಸು: ನಡೆಸು; ನೆರವೇರಿಸು: ಕಾರ್ಯರೂಪಕ್ಕೆ ತರು.
  5. (ಉದ್ದೇಶಕ್ಕೆ) ಸರಿಹೊಂದು; ಸಾಕಾಗಿರು; ಅನುಗುಣವಾಗಿರು.
  6. (ನಿಯಮಗಳನ್ನು) ಪಾಲಿಸು; ನೆರವೇರಿಸು: ಅನುಸರಿಸು.
  7. (ಕಾಲಾವಧಿ, ಕೆಲಸ) ಕೊನೆಮುಟ್ಟಿಸು; ಮುಗಿಸು; ಪೂರ್ಣಗೊಳಿಸು; ಪೂರೈಸು; ಪೂರ್ತಿಮಾಡು; ಮುಕ್ತಾಯಮಾಡು: he had fulfilled three score years ಅವನು ಅರುವತ್ತು ವರ್ಷಗಳನ್ನು ಪೂರೈಸಿದ್ದನು.
  8. ಪೂರ್ಣತೆ ಪಡೆ; ಸಾಧ್ಯತೆಗಳನ್ನು ಪೂರ್ಣವಾಗಿ ಸಾಧಿಸು: ಪೂರ್ಣವಿಕಾಸ ಪಡೆ; ಪೂರ್ತಿ ಅಭಿವೃದ್ಧಿಹೊಂದು: the right of a man to fulfil himself ಪೂರ್ಣ ವಿಕಾಸ ಪಡೆಯುವ ಮಾನವನ ಹಕ್ಕು; ತನ್ನ ಸಹಜ ಗುಣಶಕ್ತಿಗಳನ್ನು ಮತ್ತು ನಿಜಸ್ವರೂಪವನ್ನು ಸಂಪೂರ್ಣವಾಗುವಂತೆ ಬೆಳೆಸಿಕೊಳ್ಳುವ ಹಕ್ಕು.