fulcrum ಹ(ಹು)ಲ್‍ಕ್ರಮ್‍
ನಾಮವಾಚಕ
(ಬಹುವಚನ fulcra ಯಾ -fuls).
  1. (ಭೌತವಿಜ್ಞಾನ) ಊರೆ; ಆನಿಕೆ; ಅವಲಂಬಿ; ಸನ್ನೆಕೋಲನ್ನು ಪ್ರಯೋಗಿಸುವಾಗ ಅದು ತಿರುಗಲು ಆಸರೆ ನೀಡುವ ಬಿಂದು. Figure: fulcrum
  2. ಪ್ರಭಾವ ಸಾಧನ; ಪ್ರಭಾವ ಮೊದಲಾದವು ಫಲಕಾರಿಯಾಗುವಂತೆ ಮಾಡುವ ಸಾಧನ, ಉಪಾಯ.
  3. (ಸಸ್ಯವಿಜ್ಞಾನ) (ಸಾಮಾನ್ಯವಾಗಿ ಬಹುವಚನದಲ್ಲಿ) ಆಸರೆ; ಆನಿಕೆ; (ಬಳ್ಳಿಯ ಉಪಪತ್ರ, ಅಡರುಕುಡಿಯಂಥ) ಯಾವುದೇ ಆಧಾರ ಕೊಡುವ ಸಸ್ಯಭಾಗ.