See also 2fugue
1fugue ಹ್ಯೂಗ್‍
ನಾಮವಾಚಕ
  1. (ಸಂಗೀತ) ‘ಹ್ಯೂಗ್‍’; ಪೂರ್ಣಕೃತಿಯ ಒಂದು ಭಾಗದಲ್ಲಿ ಸಣ್ಣ ಗೀತಕ ವಿಷಯವನ್ನು ಆರಂಭಿಸಿ, ಕೃತಿಯ ಇತರ ಭಾಗಗಳಲ್ಲಿ ಅದನ್ನು ಅನುಕ್ರಮವಾಗಿ ಹೆಣೆಯುತ್ತ ವಿಸ್ತರಿಸುವ ಬಹುಸ್ವರ ರಚನೆ.
  2. (ಮನಶ್ಶಾಸ್ತ್ರ) ಸ್ವಾತ್ಮವಿಸ್ಮೃತಿ; ಸ್ವರೂಪವಿಸ್ಮೃತಿ; ಆತ್ಮವಿಸ್ಮೃತಿ; ತಾನು ಯಾರೆಂಬುದನ್ನು ಮರೆತು, ಅನೇಕವೇಳೆ ತನ್ನ ವಾಡಿಕೆಯ ಓಡಾಟದ ಸ್ಥಳಗಳಿಂದ ಹೊರಟುಹೋಗಿ, ಹೊಸ ಜೀವನವನ್ನು ಪ್ರಾರಂಭಿಸುವ ಮತ್ತು ಪುನಃಸ್ಮರಣೆ ಬಂದು ಸರಿಹೋದಾಗ ಮೊದಲಿನ ಮರವೆಯ ಅವಧಿಯಲ್ಲಿ ಜರುಗಿದ ಯಾವುದರ ಜ್ಞಾಪಕವೂ ಬರದ ಒಂದು ಮಾನಸಿಕ ವ್ಯಾಧಿ.
ಪದಗುಚ್ಛ

double fugue (ಸಂಗೀತ) ಹೂಗ್‍ದ್ವಯ; ಎರಡು ಹ್ಯೂಗ್‍ಗಳನ್ನೊಳಗೊಂಡ ಬಹುಸ್ವರ ರಚನೆ.

See also 1fugue
2fugue ಹ್ಯೂಗ್‍
ಸಕರ್ಮಕ ಕ್ರಿಯಾಪದ

(ಸಂಗೀತ) ಹ್ಯೂಗ್‍ ಕೃತಿಯಾಗಿ ನುಡಿಸು: they fugued it ಆ ಕೃತಿಯನ್ನು ಹ್ಯೂಗ್‍ ಕೃತಿಯಾಗಿ ನುಡಿಸಿದರು.

ಅಕರ್ಮಕ ಕ್ರಿಯಾಪದ

ಹ್ಯೂಗ್‍ಕೃತಿಯನ್ನು ರಚಿಸು ಯಾ ನುಡಿಸು: half-a-dozen fiddles fugued away in the galleries ಗ್ಯಾಲರಿಗಳಲ್ಲಿ ಐದಾರು ಪಿಟೀಲುಗಳು ಹ್ಯೂಗ್‍ಗಳನ್ನು ನುಡಿಸಿದವು.