See also 2fry  3fry
1fry ಹ್ರೈ
ನಾಮವಾಚಕ
  1. ಆಗತಾನೆ ಮೊಟ್ಟೆಯಿಂದ ಹೊರಕ್ಕೆ ಬಂದ ಈನು ಮರಿಗಳು.
  2. ವಿಪುಲವಾಗಿ ಉತ್ಪತ್ತಿಯಾಗುವ ಇತರ ಪ್ರಾಣಿಗಳ, ಉದಾಹರಣೆಗೆ ಜೇನುಹುಳುಗಳ, ಕಪ್ಪೆಗಳ – ಮರಿಗಳು.
ನುಡಿಗಟ್ಟು

small fry ಚಿಳ್ಳೆಪಿಳ್ಳೆ:

  1. ಚಿಕ್ಕಪುಟ್ಟ ಯಾ ಲೆಕ್ಕಕ್ಕೆ ಬಾರದ ವ್ಯಕ್ತಿಗಳು, ಜನ.
  2. ಮಕ್ಕಳು.
See also 1fry  3fry
2fry ಹ್ರೈ
ಸಕರ್ಮಕ ಕ್ರಿಯಾಪದ
  1. ಕುದಿಯುವ ಎಣ್ಣೆ ಯಾ ತುಪ್ಪದಲ್ಲಿ ಕರಿ ಯಾ ಹುರಿ.
  2. (ಅಶಿಷ್ಟ) ವಿದ್ಯುದ್ವಧೆ ಮಾಡು; ವಿದ್ಯುತ್ತನ್ನು ಹರಿಸಿ ಸಾಯಿಸು.
  3. (ಭೂತಕೃದಂತದಲ್ಲಿ) ಕುಡಿದಿರುವ.
ಅಕರ್ಮಕ ಕ್ರಿಯಾಪದ
  1. ಹುರಿ ಯಾ ಕರಿ.
  2. (ಅಶಿಷ್ಟ) ವಿದ್ಯುದ್ವಧೆಯಾಗು; ವಿದ್ಯುತ್‍ ಹರಿದು ಸಾಯು.
See also 1fry  2fry
3fry ಹ್ರೈ
ನಾಮವಾಚಕ
  1. ಕರಿದ ಮಾಂಸ.
  2. ಪ್ರಾಣಿಗಳ (ಸಾಮಾನ್ಯವಾಗಿ ಕರಿದ, ಮುಖ್ಯವಾಗಿ ಕುರಿಮರಿಯ) ವಿವಿಧ ಒಳ ಅವಯವಗಳು.
  3. (ಅಮೆರಿಕನ್‍ ಪ್ರಯೋಗ) ಕರಿದ ಆಹಾರತಿನ್ನಲು ಸೇರುವ ಸಂತೋಷಕೂಟ.