See also 2frown
1frown ಹ್ರೌನ್‍
ಸಕರ್ಮಕ ಕ್ರಿಯಾಪದ
  1. (ತಡೆ ಮಾಡುವವನನ್ನು, ತಡೆಯನ್ನು) ಹುಬ್ಬುಜರ್ಬಿನಿಂದ ಬಾಯಿಮುಚ್ಚಿಸುವುದು, ಅಡಗಿಸುವುದು, ಓಡಿಸಿಬಿಡುವುದು, ಮೊದಲಾದವನ್ನು ಮಾಡು.
  2. (ನಿರ್ಲಕ್ಷ್ಯ, ಪ್ರತಿಭಟನಾ ಮನೋಭಾವ, ಮೊದಲಾದವನ್ನು) ಹುಬ್ಬು ಜರ್ಬಿನಿಂದ ಸೂಚಿಸು: frown defiance upon ಹುಬ್ಬುಗಂಟಿಕ್ಕಿ ಪ್ರತಿಭಟನಾ ಮನೋಭಾವ ತೋರಿಸು.
ಅಕರ್ಮಕ ಕ್ರಿಯಾಪದ
  1. (ಅಸಂತೋಷ ಯಾ ಕೋಪ ತೋರಿಸಲು, ಇಲ್ಲವೆ ಗಮನ ಸೆಳೆಯಲು) ಹುಬ್ಬು ಗಂಟಿಕ್ಕು; ಮುಖ ಗಂಟುಹಾಕಿಕೊ; ಮುಖ ಸಿಂಡರಿಸು.
  2. (ವಸ್ತುಗಳ ವಿಷಯದಲ್ಲಿ) ಕಳೆಯಿಲ್ಲದಿರು; ನಿಸ್ತೇಜವಾಗಿರು; ನಿರುತ್ಸಾಹಜನಕವಾಗಿರು.
  3. ಅಸಮ್ಮತಿ ಸೂಚಿಸು; ಅಸಮಾಧಾನ ತೋರಿಸು.
See also 1frown
2frown ಹ್ರೌನ್‍
ನಾಮವಾಚಕ
  1. ಹುಬ್ಬುಗಂಟು; ಮುಖ ಗಂಟು.
  2. (ಉಗ್ರತೆ, ಅಸಮ್ಮತಿ ಯಾ ಗಾಢಾಲೋಚನೆ ಸೂಚಿಸುವ) ಮುಖಭಾವ:
    1. ತೀಕ್ಷ್ಣದೃಷ್ಟಿ; ಕೋಪದೃಷ್ಟಿ.
    2. ಅಸಂತೋಷದೃಷ್ಟಿ; ಅಸಮಾಧಾನದೃಷ್ಟಿ.
    3. ಗಾಢಚಿಂತನೆಯ ದೃಷ್ಟಿ.