frontage ಹ್ರಾಂಟಿಜ್‍
ನಾಮವಾಚಕ
  1. ಮುನ್ನೆಲ;
    1. ಬೀದಿಗೆ, (ಜಲಾಶಯದ) ನೀರಿನ ಹರವಿಗೆ – ಹೊದ್ದಿಕೊಂಡಿರುವ ನೆಲ.
    2. ಮುನ್ನೆಲ; ಮನೆಯ ಮುಂಭಾಗಕ್ಕೂ ರಸ್ತೆಗೂ ನಡುವೆ ಇರುವ ನೆಲ.
  2. ಮುಂಭಾಗದ ಹರವು; ಮುನ್ನೆಲದ ವಿಸ್ತಾರ.
  3. ಕಟ್ಟಡದ – ಮುಖ, ಮುಂಭಾಗ.
  4. ಬೀಡು ನೆಲ ಯಾ ಪ್ರದರ್ಶನಭೂಮಿ; ಸೇನೆ ಬಿಡಾರಹಾಕಿದಾಗ ಯಾ ಪ್ರದರ್ಶನ ನಡೆಸುವಾಗ ಆಕ್ರಮಿಸುವ ಸ್ಥಳ.
  5. ಅಭಿಮುಖತೆ; ಯಾವುದೇ ದಿಕ್ಕಿಗೆ ತಿರುಗಿಕೊಂಡಿರುವಿಕೆ; ಗಾಳಿ, ಬೆಳಕು, ಮಳೆ, ಶತ್ರುವಿನ ಆಕ್ರಮಣ, ಮೊದಲಾದವಕ್ಕೆ ಒಡ್ಡಿರುವ ಮುಖ: we changed frontage to meet their flank attack ಅವರು ಒಂದು ಪಾರ್ಶ್ವದಿಂದ ಮಾಡಿದ ದಾಳಿಯನ್ನು ಎದುರಿಸಲು ನಾವು ನಮ್ಮ ಸೇನೆಯ ಮುಖವನ್ನೇ ಬದಲಾಯಿಸಿದೆವು.