See also 2front  3front
1front ಹ್ರಂಟ್‍
ನಾಮವಾಚಕ
  1. (ಯಾವುದೇ ವಸ್ತುವಿನ) ಮುಂಭಾಗ; ಮುಖ; ಸಾಮಾನ್ಯವಾಗಿ ವೀಕ್ಷಕನ ಹತ್ತಿರ ಯಾ ಎದುರಿಗೆ ಚಲಿಸುವ ದಿಕ್ಕಿನಲ್ಲಿ ಇರುವ ಭಾಗ ಯಾ ಪಾರ್ಶ್ವ: the front of the car ಕಾರಿನ ಮುಂಭಾಗ. front door ಮುಂಬಾಗಿಲು.
  2. (ಕಾವ್ಯಪ್ರಯೋಗ, ರೂಪಕವಾಗಿ) ಹಣೆ; ಲಲಾಟ; ಫಾಲ.
  3. ಮುಖ; ಮೋರೆ: front to front ಮುಖಾಮುಖಿಯಾಗಿ; ಎದುರೆದುರಿಗೆ.
  4. (ಸೈನ್ಯ)
    1. ಮುಂಚೂಣಿ; ಮುಂದಿನ ಸಾಲು.
    2. ಸಂಗ್ರಾಮದ, ಹೋರಾಟದ – ಸಾಲು.
    3. ಶತ್ರುಸೈನ್ಯವು ನಿಜವಾಗಿ ಇರುವ ಯಾ ಇರಬಹುದೆಂದು ಭಾವಿಸಲಾದ ಕದನಭೂಮಿ.
    4. ಕದನರಂಗ; ಕಾಳಗ ನಡೆಯುತ್ತಿರುವ ಸ್ಥಾನ: go to the front ಯುದ್ಧರಂಗಕ್ಕೆ ಹೋಗು.
    5. ಸೇನಾ ಮುಖ; ಸೇನೆಯ ಸಾಲು ಮುಖ ಮಾಡಿಕೊಂಡಿರುವ ದಿಕ್ಕು: change front (ಸೇನೆಯನ್ನು) ಬೇರೆ ಮುಖಕ್ಕೆ ತಿರುಗಿಸು; ದಿಕ್ಕು ಬದಲಾಯಿಸು; (ಸೇನೆ) ಬೇರೆ ಮುಖಕ್ಕೆ ತಿರುಗು.
  5. (ರೂಪಕವಾಗಿ) ಕಾರ್ಯಕ್ಷೇತ್ರ; ರಂಗ ಸಂಘಟಿತ ಸಂಸ್ಥೆಯ ಯಾ ಯಾವುದೇ ಕಾರ್ಯಕ್ಷೇತ್ರದ ಖಾತೆ, ಇಲಾಖೆ: home front ಗೃಹಾಡಳಿತ ಕ್ಷೇತ್ರ; ಗೃಹರಂಗ.
  6. (ಯಾವುದಾದರೂ ಉದ್ದೇಶದಿಂದ) ಸಂಘಟಿತವಾದ ರಾಜಕೀಯ ಪಕ್ಷ, ಗುಂಪು, ವರ್ಗ.
  7. (ವಾಸ್ತುಶಿಲ್ಪ) ಕಟ್ಟಡದ ಯಾವುದೇ ಮುಖ (ಮುಖ್ಯವಾಗಿ ಮುಮ್ಮುಖ).
  8. ಹೊರವೇಷ; ಬಾಹ್ಯರೂಪ.
  9. ಸೋಗಾಳಿ; ವಂಚಕ; ಮೋಸಗಾರ.
  10. ನೆಪ; ವ್ಯಾಜ; ಸಬೂಬು.
  11. ಮುಖವಾಡ; ಬುಡಮೇಲು ಮಾಡುವ ಯಾ ಕಾನೂನುಬಾಹಿರವಾದ ಕಾರ್ಯಾಚರಣೆಗಳನ್ನು, ಚಟುವಟಿಕೆಗಳನ್ನು ಮರೆಯಲ್ಲಿಡಲು ಸಹಾಯಕವಾಗಿರುವ ವ್ಯಕ್ತಿ ಮೊದಲಾದವರು.
  12. (ಪವನಶಾಸ್ತ್ರ) ಚೂಣಿ; ತಂಪಾದ ಮತ್ತು ಬೆಚ್ಚನೆಯ ವಾಯುರಾಶಿಗಳ ಸಂಧಿಸ್ಥಾನ: cold front ತಂಪುಚೂಣಿ; ತಂಪಾಗಿರುವ ವಾಯುರಾಶಿಯು ಮುನ್ನುಗ್ಗುತ್ತಿರುವಾಗ ಅದರ ಚೂಣಿ.
  13. (ಬ್ರಿಟಿಷ್‍ ಪ್ರಯೋಗ) (ಕಡಲ್ಗರೆಯ ವಿಶ್ರಾಮಧಾಮದ) ವಿಹಾರಪಥ; ವಿಹಾರಮಾರ್ಗ.
  14. (ಹೆಂಗಸರು ಧರಿಸುವ) ಕೃತಕ ಕೇಶರಾಶಿ ಯಾ ಮುಂಗುರುಳುರಾಶಿ.
  15. ಮುಂಭಾಗ; ಅಗ್ರ; ಮುಂದುಗಡೆ.
  16. ಗಂಡಸಿನ ಷರ್ಟಿನ ಮುಂಭಾಗ.
  17. ಷರ್ಟಿನ ಹುಸಿ ಮುಂಭಾಗ.
  18. (ನಾಟಕ)
    1. ರಂಗಾಗ್ರ; ರಂಗಭೂಮಿಯ – ಮುಂಭಾಗ, ಮುನ್ನೆಲ; ಪ್ರೇಕ್ಷಕರಿಗೆ ಹತ್ತಿರವಾಗಿರುವ ಭಾಗ.
    2. ಪ್ರೇಕ್ಷಕಾಂಗಣ; ಪ್ರೇಕ್ಷಕರು ಕುಳಿತುಕೊಳ್ಳುವ ಜಾಗ.
ಪದಗುಚ್ಛ
  1. in front ಮುಂದೆ; ಮುಂದುಗಡೆ.
  2. in front of
    1. ಮುಂಭಾಗದಲ್ಲಿ; ಮುಂದುಗಡೆಯಲ್ಲಿ.
    2. ಮುಂದಾಗಿ; ಮುಂದೆ.
    3. ಎದುರಾಗಿ; ಅಭಿಮುಖವಾಗಿ.
    4. ಸಮ್ಮುಖದಲ್ಲಿ; ಇದಿರಿನಲ್ಲಿ; ಸಮಕ್ಷ.
ನುಡಿಗಟ್ಟು
  1. come to the front ಮುಂದಕ್ಕೆ ಬರು; ಪ್ರಮುಖನಾಗು; ಪ್ರಾಶಸ್ತ್ಯ ಪಡೆ.
  2. have the front to do ಯಾವುದೇ (ಕಾರ್ಯ ಮೊದಲಾದವನ್ನು) ಮಾಡಲು ಮುಖ ಪಡೆದಿರು; ಮಾಡುವ ಧಾಷ್ಟ ಪಡೆದಿರು.
  3. head and front ಮುಖ್ಯಾಂಶ; ಮುಖ್ಯ ವಿವರ.
  4. present (or show) a bold front ಧೈರ್ಯದಿಂದ ಎದುರಿಸು, ಎದುರಿಸಿ ನಿಲ್ಲು.
See also 1front  3front
2front ಹ್ರಂಟ್‍
ಗುಣವಾಚಕ
  1. ಮುಂದಿನ.
  2. ಮುಂದಿರುವ; ಅಗ್ರದಲ್ಲಿರುವ; ಮುಂದುಗಡೆ ಇರುವ.
  3. (ಧ್ವನಿ) ಅಗ್ರ; ಬಾಯಿಯ ಮುಂಭಾಗದಲ್ಲಿ ಜನಿಸುವ.
See also 1front  2front
3front ಹ್ರಂಟ್‍
ಸಕರ್ಮಕ ಕ್ರಿಯಾಪದ
  1. ಎದುರಾಗಿ ನಿಲ್ಲು; ಅಭಿಮುಖವಾಗು; ಮುಖಾಮುಖಿಯಾಗು.
  2. (ರಸ್ತೆ ಮೊದಲಾದವುಗಳ ಕಡೆಗೆ) ಅಭಿಮುಖವಾಗು; ಮುಂಭಾಗ ಹೊಂದಿರು.
  3. (ವಾದ್ಯತಂಡವನ್ನು) ಸ್ವತಃ ನಡೆಸು; ಖುದ್ದಾಗಿ ಬಾರಿಸುತ್ತಾ ನಡೆಸು; ತಾನೇ ಮುಂದಾಗಿ ನಿರ್ದೇಶಿಸು.
  4. (ಪ್ರಾಚೀನ ಪ್ರಯೋಗ) ಸಂಧಿಸು.
  5. (ಪ್ರಾಚೀನ ಪ್ರಯೋಗ) ವಿರೋಧಿಸು.
  6. ಮುಖ ಕಟ್ಟು; ಮುಮ್ಮೈ – ರಚಿಸು, ಒದಗಿಸು: fronted with stone ಕಲ್ಲಿನ ಮುಖ ಕಟ್ಟು ಒದಗಿಸಿದ.
ಅಕರ್ಮಕ ಕ್ರಿಯಾಪದ
  1. ಎದುರಾಗಿರು; ಅಭಿಮುಖವಾಗಿರು; ಒಬ್ಬನ ಯಾ ಒಂದರ ಮುಂಭಾಗವನ್ನು ಒಂದರತ್ತ ತಿರುಗಿಸಿರು.
  2. (ಅಶಿಷ್ಟ) ಮುಖವಾಡ ಆಗಿರು; ಮುಖವಾಡವಾಗಿ ವರ್ತಿಸು; ಕಾನೂನುಬಾಹಿರವಾದ ಯಾ ಅವಮಾನಕರವಾದ ಕಾರ್ಯಾಚರಣೆಗಳನ್ನು ಗೋಪ್ಯವಾಗಿ ಇಡಲು ತೆರೆಯಂತೆ ಸಹಾಯಕವಾಗು.