from ಹ್ರಮ್‍ (ಅವಧಾರಣೆಯಿರುವಾಗ) ಹ್ರಾಮ್‍
ಉಪಸರ್ಗ
  1. ಇಂದ: repeated from mouth to mouth ಬಾಯಿಂದ ಬಾಯಿಗೆ ಪ್ರಚಾರವಾಗಿ; ಮುಖದಿಂದ ಮುಖಕ್ಕೆ ಹರಡಿ.
  2. -ಇಂದ ಮೊದಲುಗೊಂಡು, ಪ್ರಾರಂಭಿಸಿ, ಮೊದಲಾಗಿ, ಹಿಡಿದು: from title to colophon ಪುಸ್ತಕದ ಹೆಸರಿನಿಂದ ಹಿಡಿದು ಕೊನೆಯವರೆಗೂ; ಆದ್ಯಂತವಾಗಿ; ಆಮೂಲಾಗ್ರವಾಗಿ. from 1st April ಏಪ್ರಿಲ್‍ 1 ರಿಂದ ಪ್ರಾರಂಭಿಸಿ.
  3. (ಕೆಳ ಪರಿಮಿತಿ) -ಇಂದ: saw from ten to twenty boats ಹತ್ತರಿಂದ ಇಪ್ಪತ್ತು ದೋಣಿಗಳನ್ನು ಕಂಡೆ. tickets from Rs. 5/- ಐದು ರೂಪಾಯಿಗಿಂತ ಮೇಲ್ಪಟ್ಟ ಟಿಕೆಟ್ಟುಗಳು.
  4. (ದೂರ) – ಇಂದ: ten miles from Rome ರೋಮ್‍ನಿಂದ 10 ಮೈಲಿ ದೂರ. far from saying (ಒಂದನ್ನು) ಹೇಳುತ್ತಿರದೆ; ಹೇಳುವುದರಿಂದ ದೂರವಾಗಿ. far from blaming you ನಿನ್ನನ್ನು ದೂರದೆ.
  5. (ಸ್ಥಿತಿ ಯಾ ಪ್ರಮಾಣ)-ಇಂದ: from being attacked became the aggressor ಆಕ್ರಮಣಕ್ಕೊಳಗಾಗಿದ್ದರಿಂದ ತಾನೇ ಆಕ್ರಮಣಕಾರನಾದ. raise penalty from banishment to death ಶಿಕ್ಷೆಯನ್ನು ಗಡೀಪಾರಿನಿಂದ ಮರಣ ದಂಡನೆಗೇರಿಸು. things are going from bad to worse ಪರಿಸ್ಥಿತಿ ಕೆಟ್ಟದ್ದರಿಂದ ಇನ್ನೂ ಕೆಟ್ಟದ್ದಕ್ಕೆ ಸರಿಯುತ್ತಿದೆ, ಇನ್ನೂ ಹದಗೆಡುತ್ತಿದೆ.
  6. -ದೆಸೆಯಿಂದ; ಒಂದರಿಂದ ಇನ್ನೊಂದನ್ನು(ಪ್ರತ್ಯೇಕಿಸಿ, ಬೇರ್ಪಡಿಸಿ): doesn’t know black from white ಕಪ್ಪಿನಿಂದ ಬಿಳುಪನ್ನು ಬೇರ್ಪಡಿಸಲಾರ; ಕಪ್ಪಿಗೂ ಬಿಳುಪಿಗೂ ವ್ಯತ್ಯಾಸವನ್ನರಿಯ. differs from all others ಉಳಿದೆಲ್ಲವುಗಳಿಂದ ಭಿನ್ನವಾಗಿದೆ, ಬೇರೆಯಾಗಿದೆ.
  7. ಮೂಲ ಮೊದಲಾದವುಗಳಿಂದ: draw conclusions from premises ಪ್ರತಿಜ್ಞೆಗಳಿಂದ ಅನುಮಾನಿಸು; ಪ್ರತಿಜ್ಞೆಗಳಿಂದ ನಿರ್ಣಯ ಮಾಡು: dig gold from mine ಗಣಿಯಿಂದ ಚಿನ್ನವನ್ನು ಅಗೆದು ತೆಗೆ. quotations from Pampa ಪಂಪನಿಂದ ಆಯ್ದ ಉಲ್ಲೇಖಗಳು. draw water from a well ಬಾವಿಯಿಂದ ನೀರನ್ನು ಸೇದು.
  8. (ಕೊಡುವವ, ಕಳುಹಿಸುವವ, ಮೊದಲಾದವರು)-ಇಂದ: gifts from Providence ದೇವರಿಂದ ಬಂದ ವರಗಳು; ದೈವದತ್ತ ವರಗಳು. no news from him ಅವನಿಂದ ಯಾವ ಸುದ್ದಿಯೂ ಇಲ್ಲ. tell him from me ನಾನು ಹೇಳಿದೆನೆಂದು ಅವನಿಗೆ ಹೇಳು.
  9. ಮಾದರಿ ಮೊದಲಾದವುಗಳಿಂದ: painted from nature ಪ್ರಕೃತಿಯ ಮಾದರಿಯಿಂದ, ಪ್ರಕೃತಿಯನ್ನು ಅನುಕರಿಸಿ, ನಿಸರ್ಗವನ್ನು ಎದುರಿಗಿಟ್ಟುಕೊಂಡು – ಚಿತ್ರಿಸಿದ.
  10. ಕಾರಣ, ಉದ್ದೇಶ, ಪ್ರೇರಣೆ, ಮೊದಲಾದವುಗಳಿಂದ: died from fatigue ದಣಿವಿನಿಂದ ಸತ್ತ. from his looks you might suppose ಅವನ ಮುಖಚರ್ಯೆಯಿಂದ ನೀನು ಊಹಿಸಬಹುದು. from a sense of duty ಕರ್ತವ್ಯದೃಷ್ಟಿಯ ಕಾರಣದಿಂದ.
  11. (ಬೇರ್ಪಡಿಸಿದ, ತೆಗೆದುಹಾಕಿದ, ತಪ್ಪಿಸಿದ, ಕಳೆದುಕೊಂಡ, ಬಿಡಿಸಿದ, ಬಿಡುಗಡೆಪಡೆದ, ಮೊದಲಾದ ವ್ಯಕ್ತಿ ಯಾ ವಸ್ತು) -ಇಂದ: took his pistol from him ಅವನಿಂದ ಅವನ ಪಿಸ್ತೂಲನ್ನು ಕಸಿದ. released from prison ಜೈಲಿನಿಂದ ಬಿಡುಗಡೆ ಪಡೆದ. dissuade from folly ಅವಿವೇಕ(ದಿಂದ) ತಪ್ಪಿಸು. I cannot refrain from laughing ನಗುವನ್ನು ತಡೆಯಲಾರೆ; ನಗದಿರಲಾರೆ.
  12. ಮೂಲದ್ರವ್ಯದಿಂದ: steel is made from iron ಉಕ್ಕು ಕಬ್ಬಿಣದಿಂದ ತಯಾರಾಗಿದೆ.
  13. ನೋಡುವವನ ಸ್ಥಾನ ಮೊದಲಾದವುಗಳಿಂದ, ಮೊದಲಾದವುಗಳ ಕಡೆಯಿಂದ: saw it from the roof ಮಾಳಿಗೆಯಿಂದ ನೋಡಿದ.
  14. (ಸ್ಥಳ ಯಾ ಕಾಲವಾಚಿ ಕ್ರಿಯಾವಿಶೇಷಣಗಳೊಡನೆ) -ಇಂದ: from above ಮೇಲಿನಿಂದ. from within ಒಳಗಿನಿಂದ. from long ago ಬಹಳ ಹಿಂದಿನ ಕಾಲದಿಂದ. from of old ಹಿಂದಿನ ಕಾಲದಿಂದ. from hence ಇಲ್ಲಿಂದ; ಈ ಜಾಗದಿಂದ.
  15. (ಸ್ಥಳ ಯಾ ಸ್ಥಿತಿವಾಚಕ ಉಪಸರ್ಗಗಳೊಡನೆ)-ಇಂದ: from amidst the trees ಮರಗಳ ನಡುವಿನಿಂದ. from behind her spectacles ಅವಳ ಕನ್ನಡಕದ ಹಿಂದಿನಿಂದ, ಹಿಂಬದಿಯಿಂದ.
ಪದಗುಚ್ಛ
  1. from a child ಮಗುವಾಗಿದ್ದಾಗಿನಿಂದ; ಬಾಲ್ಯಾರಭ್ಯ.
  2. from day today ಪ್ರತಿದಿನವೂ ನಿತ್ಯವೂ.
  3. from home ಮನೆಯಿಂದ – ಹೊರಗೆ, ದೂರವಾಗಿ.
  4. from his point of view ಅವನ ದೃಷ್ಟಿಕೋನದಿಂದ.
  5. from now on ಇನ್ನು ಮುಂದೆ; ಇನ್ನು ಮೇಲೆ; ಇತಃಪರ.
  6. from out the bed ಹಾಸಿಗೆಯಿಂದ ಹೊರಕ್ಕೆ; ಹಾಸಿಗೆಬಿಟ್ಟು.
  7. from time to time ಆಗಿಂದಾಗ್ಯೆ; ಕಾಲಕಾಲಕ್ಕೆ.
  8. from year to year
    1. ಪ್ರತಿವರ್ಷ; ವರ್ಷೇವರ್ಷೇ.
    2. ವರ್ಷಗಳು ಕಳೆದಂತೆ; ವರ್ಷದಿಂದ ವರ್ಷಕ್ಕೆ.