See also 2fringe
1fringe ಹ್ರಿಂಜ್‍
ನಾಮವಾಚಕ
  1. (ನೆಯ್ದ ಬಟ್ಟೆಯ) ಅಂಚು; ಕರೆ; ಸೆರಗು; ಅರಗು.
  2. ಬೇರೆ ಬಗೆಯಾಗಿ ಆದ ಇಂಥ ಅಂಚು: fringe of clouds ಮೋಡಗಳ ಅಂಚು.
  3. ಏಣು; ಅಗ್ರ; ತುದಿ; ಅಂಚು.
  4. (ಹಣೆಯ ಮೇಲೆ ತೊಂಗುವಂತೆ ಮೋಟಾಗಿ ಕತ್ತರಿಸಿದ) ಮುಂಗುರುಳು.
  5. (ಪ್ರಾಣಿಯ ಯಾ ಪಕ್ಷಿಯ ವಿಷಯದಲ್ಲಿ) ಕೂದಲು, ಗರಿ, ಮೊದಲಾದವುಗಳ ಅಂಚು.
  6. (ಸಸ್ಯದ ವಿಷಯದಲ್ಲಿ) ಎಲೆ, ಹೂವು, ಮೊದಲಾದವುಗಳ ಅಂಚು.
  7. (ಒಂದು ದೇಶ, ಪ್ರದೇಶ, ಜನಸಂಖ್ಯೆ, ಮೊದಲಾದವುಗಳ) ಹೊರ ಎಲ್ಲೆ, ಮೇರೆ, ಮಿತಿ.
  8. ಗೌಣ, ಅಮುಖ್ಯ, ಅಪ್ರಧಾನ – ಆದದ್ದು.
  9. ಅಂಚು; ಬೆಳಕಿನ ವಿವರ್ತನೆ (diffraction) ಯಾ ಅಡ್ಡ ಹಾಯುವಿಕೆಯಿಂದಾಗಿ (interference) ಉಜ್ಜ್ವಲವಾಗಿ ಯಾ ಮಬ್ಬಾಗಿ ಕಾಣುವ ಪಟ್ಟಿ.
  10. (ದೃಕ್‍ಬಿಂಬವೊಂದರಲ್ಲಿನ) ಹುಸಿ ಬಣ್ಣದ ಪಟ್ಟಿ.
  11. = fringe benefit.
ಪದಗುಚ್ಛ
  1. fringe of a subject ವಿಷಯವೊಂದರ ಪ್ರಾರಂಭ.
  2. lunatic fringe ಯಾವುದೇ ರಾಜಕೀಯ ಪಕ್ಷ ಮೊದಲಾದವುಗಳ ಅಂಧಾಭಿಮಾನವುಳ್ಳ ಯಾ ವಕ್ರಬುದ್ಧಿಯುಳ್ಳ ಯಾ ಕಾರ್ಯರೂಪಕ್ಕೆ ತರಲು ಸಾಧ್ಯವಿಲ್ಲದ ಅಭಿಪ್ರಾಯಗಳುಳ್ಳ ಅಲ್ಪಸಂಖ್ಯಾತರ ಗುಂಪು.
See also 1fringe
2fringe ಹ್ರಿಂಜ್‍
ಸಕರ್ಮಕ ಕ್ರಿಯಾಪದ
  1. (ಬಟ್ಟೆ ಮೊದಲಾದವುಗಳ ವಿಷಯದಲ್ಲಿ) ಅಂಚನ್ನು ಯಾ ಅಂಚಿನಂತಹ ವಸ್ತುವನ್ನು ಕೊಟ್ಟು ಅಲಂಕರಿಸು.
  2. (ಯಾವುದರದಾದರೂ) ಅಂಚಾಗು; ಎಲ್ಲೆಯಾಗು; ಅರುಗಾಗು.
  3. ಅಂಚಿನಂತಿರು; ಅಂಚಿನಂತೆ ಸುತ್ತುವರಿದಿರು.