See also 2frill
1frill ಹ್ರಿಲ್‍
ನಾಮವಾಚಕ
  1. (ನೆಯ್ದ ಬಟ್ಟೆಯ) ನೆರಿಗೆ ಅಂಚು; ನಿರಿಹಿಡಿದ ಅಂಚು.
  2. ನಿರಿ; ನೆರಿಗೆ.
  3. (ಬೇಯಿಸಿದ ಹಂದಿಮಾಂಸ ಮೊದಲಾದವನ್ನು ಊಟಕ್ಕಾಗಿ ಇಡುವಾಗ, ಕಾಲ್ಗಿಣ್ಣಿನ ಸುತ್ತಲೂ ಹಚ್ಚುವ) ಕಾಗದದ ನೆರಿಗೆ ಅಲಂಕಾರ.
  4. (ಪಕ್ಷಿಯ, ಪ್ರಾಣಿಯ, ಯಾ ಸಸ್ಯದ ಪುಕ್ಕ, ಕೂದಲು, ಗರಿ, ಎಲೆ, ಮೊದಲಾದವುಗಳ) ಕುಚ್ಚಿನ ಅಂಚು; ಕುಚ್ಚು ಪಟ್ಟಿ.
  5. (ಬಹುವಚನದಲ್ಲಿ, ಅಮೆರಿಕನ್‍ ಪ್ರಯೋಗ, ಆಡುಮಾತು) (ಉಡುಪಿನಲ್ಲಿಯೂ ನಡವಳಿಕೆಯಲ್ಲಿಯೂ ಕೃತಕವಾದ) ಗತ್ತು; ಠೀವಿ; ಬೆಡಗು; ವೈಖರಿ: puts on frills ಏನೋ ಗತ್ತು ತೋರಿಸುತ್ತಾಳೆ.
  6. ಕೆಲಸಕ್ಕೆ ಬಾರದ ಯಾ ನಿರುಪಯುಕ್ತ ಅಲಂಕಾರಗಳು.
  7. ಬೆಡಗಿನ ಯಾ ಆಡಂಬರದ ಕುಶಲತೆಗಳು.
  8. (ಪ್ರಾಣಿಯ) ಮಸೆಂಟರಿ; ಕರುಳನ್ನು ಹೊಟ್ಟೆಯ ಹಿಂಬದಿಗೆ ಸೇರಿಸುವ ಪೊರೆ.
  9. (ಛಾಯಾಚಿತ್ರಣ) ಅಂಚು ನೆರಿಗೆ; ಅಂಚುನಿರಿ; ಫಲಕದ ಅಂಚಿನಲ್ಲಿಯ ತೆರೆತೆರೆಯಾದ ಜೆಲಟಿನ್‍ ಪೊರೆ.
See also 1frill
2frill ಹ್ರಿಲ್‍
ಸಕರ್ಮಕ ಕ್ರಿಯಾಪದ
  1. ನೆರಿಗೆ ಕಟ್ಟು; ನಿರಿನಿರಿ ಮಾಡು.
  2. ನೆರಿಗೆ ಅಂಚುಕಟ್ಟು; ಕುಚ್ಚುನೆರಿಗೆ ಅಲಂಕಾರ ಮಾಡು.