frigidity ಹ್ರಿಜಿಡಿಟಿ
ನಾಮವಾಚಕ
  1. ಅತಿಶೈತ್ಯ; ತೀರ ಚಳಿಯ ಸ್ಥಿತಿ.
  2. (ರೂಪಕವಾಗಿ) ಉತ್ಸಾಹಶೂನ್ಯತೆ; ನಿರುತ್ಸಾಹ.
  3. ಉದಾಸೀನತೆ; ತಾತ್ಸಾರ.
  4. ಭಾವನಾಶಕ್ತಿಯಿಲ್ಲದಿರುವುದು; ಅರಸಿಕತೆ; ರಸಾನುಭವ ಇಲ್ಲದಿರುವಿಕೆ.
  5. ನೀರಸತೆ.
  6. (ಹೆಂಗಸಿನ ವಿಷಯದಲ್ಲಿ)
    1. ರತಿದ್ವೇಷ; ಮೈಥುನವಿರೋಧ.
    2. ಕಾಮರಾಹಿತ್ಯ; ಲೈಂಗಿಕವಾಗಿ ನಿರಾಸಕ್ತಿ, ಪ್ರತಿಕ್ರಿಯೆ ತೋರದಿರುವಿಕೆ.