frigid ಹ್ರಿಜಿಡ್‍
ಗುಣವಾಚಕ
  1. (ಮುಖ್ಯವಾಗಿ ವಾಯುಗುಣದ ಯಾ ವಾಯುವಿನ ಸ್ಥಿತಿಯ ವಿಷಯದಲ್ಲಿ) ಕಡುಶೀತವಾದ; ತೀರ ಚಳಿಯ: frigid zone ಶೀತವಲಯ ಪ್ರದೇಶ.
  2. ಹುರುಪಿಲ್ಲದ; ಉತ್ಸಾಹಶೂನ್ಯ; ನಿರುತ್ಸಾಹದ: a frigid reaction to the proposal ಪ್ರಸ್ತಾಪಕ್ಕೆ ಉತ್ಸಾಹ ಶೂನ್ಯ ಪ್ರತಿಕ್ರಿಯೆ.
  3. ತಾತ್ಸಾರದ; ಉದಾಸೀನ.
  4. ಬರಿಯ ಉಪಚಾರದ; ಕೇವಲ ಸಂಪ್ರದಾಯದ; ಮನಸ್ಸಿಲ್ಲದ; ಹೃತ್ಪೂರ್ವಕವಲ್ಲದ: polite but frigid welcome ವಿನಯಪೂರ್ವಕವಾದ, ಆದರೆ ಕೇವಲ ಉಪಚಾರದ ಸ್ವಾಗತ.
  5. (ಹೆಂಗಸಿನ ವಿಷಯದಲ್ಲಿ)
    1. ಸಂಭೋಗಕ್ಕೊಪ್ಪದ; ದೇಹಸಂಬಂಧ ಇಚ್ಛಿಸದ; ರತಿದ್ವೇಷಿಯಾದ.
    2. ಮೈಥುನಾಸಕ್ತಿಯಿಲ್ಲದ; ಲೈಂಗಿಕೋತ್ಸಾಹವಿಲ್ಲದ; ಲೈಂಗಿಕವಾಗಿ – ಸಹಕರಿಸದ, ಪ್ರತಿಕ್ರಿಯೆ ತೋರಿಸದ; ಕಾಮರಹಿತ.
  6. ಉತ್ಸಾಹ ಕುಗ್ಗಿಸುವ ಯಾ ಕೆಡಿಸುವ; ನಿರುತ್ಸಾಹಗೊಳಿಸುವ: the frigid splendors of the drawing room ದಿವಾನಖಾನೆಯ ನಿರುತ್ಸಾಹಜನಕ ವೈಭವಗಳು.
  7. ರಸವಿಲ್ಲದ; ಭಾವಶೂನ್ಯ: ನೀರಸ; ಸಾರವಿಲ್ಲದ; ನಿಸ್ಸಾರ: a correct but frigid presentation ತಪ್ಪಿಲ್ಲದ, ಆದರೆ ಭಾವಶೂನ್ಯಪ್ರದರ್ಶನ.