frighten ಹ್ರೈಟನ್‍
ಸಕರ್ಮಕ ಕ್ರಿಯಾಪದ
  1. ದಿಗಿಲುಗೊಳಿಸು; ಗಾಬರಿಪಡಿಸು; ಭೀತಿಹುಟ್ಟಿಸು; ಬೆದರಿಕೆ ಹುಟ್ಟಿಸು.
  2. (ಸ್ಥಳ ಮೊದಲಾದವುಗಳಿಂದ) ಬೆದರಿಸಿ ಅಟ್ಟಿಬಿಡು; ಹೆದರಿಸಿ ಓಡಿಸಿಬಿಡು: to frighten him out of his kingdom ಬೆದರಿಸಿ ಅವನ ರಾಜ್ಯದಿಂದ ಅವನನ್ನು ಓಡಿಸಲು.
  3. ಬೆದರಿಸಿ (ಅಧೀನ, ವಿಧೇಯ, ಮೊದಲಾದವು) ಆಗುವಂತೆ ಮಾಡು: frighten into submission ಹೆದರಿಸಿ ಅಧೀನ ಪಡಿಸಿಕೊ; ವಿಧೇಯನನ್ನಾಗಿ ಮಾಡಿಕೊ. frighten him into paying ಬೆದರಿಸಿ ಹಣ ಸಲ್ಲಿಸುವಂತೆ ಮಾಡು.
ಪದಗುಚ್ಛ
  1. frightened at (ಪರಿಸ್ಥಿತಿಗೆ ಯಾ ಸಂದರ್ಭಕ್ಕೆ) ಬೆದರಿ: frightened at the rising prices ಏರುತ್ತಿರುವ ಬೆಲೆಗಳಿಗೆ ಹೆದರಿ.
  2. frightened of ಬೆದರಿ; ಹೆದರಿ: frightened of doing the wrong thing ಸರಿಯಲ್ಲದ್ದನ್ನು ಮಾಡಲು ಹೆದರಿ.
  3. frightened one out of his wits ಹೆದರಿಸಿ, ಗಾಬರಿಪಡಿಸಿ ಒಬ್ಬನಿಗೆ – ದಿಕ್ಕು ತೋಚದಂತೆ ಮಾಡು, ಬುದ್ಧಿಸ್ವಾಸ್ಥ್ಯ ತಪ್ಪಿಸು.