See also 2friendly  3friendly
1friendly ಹ್ರೆಂಡ್‍ಲಿ
ಗುಣವಾಚಕ
  1. ಸ್ನೇಹದಿಂದ ವರ್ತಿಸುವ; ಸ್ನೇಹ ಪ್ರವೃತ್ತಿಯುಳ್ಳ: friendly neighbours ಸ್ನೇಹಪ್ರವೃತ್ತಿಯುಳ್ಳ ನೆರೆಯವರು.
  2. ಕೆಳೆತನದ; ಸ್ನೇಹಪೂರ್ಣ: friendly greeting ಸ್ನೇಹಪೂರ್ಣ ಸ್ವಾಗತ.
  3. ದಯಾಶಾಲಿ; ದಯೆಯನ್ನು ತೋರಿಸುವ.
  4. ಸ್ನೇಹಪರ; ಮೈತ್ರಿಯುಳ್ಳ; ಸ್ನೇಹಭಾವದಿಂದ ಕೂಡಿದ; ಹಗೆತನವಿಲ್ಲದ: a friendly nation ಸ್ನೇಹಪರ ರಾಷ್ಟ್ರ.
  5. ಅನುಕೂಲವಾದ (ಮನಸ್ಸುಳ್ಳ); ಒಲವಿರುವ.
  6. ಸಹಾಯಕ; ಅನುಮೋದಿಸಲು ಯಾ ಸಹಾಯ ಮಾಡಲು ಸಿದ್ಧವಾಗಿರುವ.
  7. (ವಸ್ತುಗಳ ವಿಷಯದಲ್ಲಿ) ಉಪಯುಕ್ತ; ಅನುಕೂಲಕರ; ಪ್ರಯೋಜನಕಾರಿ; ಸಮಯಕ್ಕೊದಗುವ.
ಪದಗುಚ್ಛ
  1. friendly action (ನ್ಯಾಯಶಾಸ್ತ್ರ) ಸ್ನೇಹಭಾವದ ದಾವೆ; ವಿವಾದದ ಯಾವುದೋ ಒಂದು ವಿವರವನ್ನು ಪರಿಹರಿಸುವುದಕ್ಕಾಗಿ ಮಾತ್ರ ನ್ಯಾಯಸ್ಥಾನಕ್ಕೆ ಸಲ್ಲಿಸಿದ ದಾವೆ.
  2. friendly lead (ಬ್ರಿಟಿಷ್‍ ಪ್ರಯೋಗ) ಲಂಡನ್ನಿನ ಬಡವರು ಸಂತ್ರಸ್ತನ ನೆರವಿಗಾಗಿ ನಿಧಿ ಕೂಡಿಸಲು ಏರ್ಪಡಿಸುವ ವಿನೋದ ಕೂಟ.
  3. friendly match (ಪಾರಿತೋಷಕ ಪಡೆಯುವ ಉದ್ದೇಶವಿಲ್ಲದೆ ಬರಿಯ ಗೌರವಕ್ಕಾಗಿ ಮಾತ್ರ ಆಡುವ) ಸ್ನೇಹದ ಪಂದ್ಯ.
  4. Friendly Society (ಬ್ರಿಟಿಷ್‍ ಪ್ರಯೋಗ) (ದುಃಸ್ಥಿತಿ, ರೋಗರುಜಿನ, ಮುಪ್ಪು, ಮೊದಲಾದವುಗಳಲ್ಲಿ ಪರಸ್ಪರ ನೆರವಾಗಲು ಏರ್ಪಡಿಸಿಕೊಂಡ) ಮಿತ್ರಸಂಘ; ಮಿತ್ರ ಮಂಡಲಿ; ಗೆಳೆಯರ ಬಳಗ.
See also 1friendly  3friendly
2friendly ಹ್ರೆಂಡ್‍ಲಿ
ನಾಮವಾಚಕ
  1. (ಸಾಮಾನ್ಯವಾಗಿ ಬಹುವಚನದಲ್ಲಿ) ವಲಸಿಗರಿಗೆ ಅನುಕೂಲರಾದ ಸ್ಥಳೀಯ ಬುಡಕಟ್ಟಿನವ.
  2. (ಪಾರಿತೋಷಕ ಪಡೆಯುವ ಉದ್ದೇಶವಿಲ್ಲದೆ ಬರಿಯ ಗೌರವಕ್ಕಾಗಿ ಮಾತ್ರ ಆಡುವ) ಸ್ನೇಹದ ಪಂದ್ಯ ಮೊದಲಾದವು.
See also 1friendly  2friendly
3friendly ಹ್ರೆಂಡ್‍ಲಿ
ಕ್ರಿಯಾವಿಶೇಷಣ

ಸ್ನೇಹದಿಂದ; ಮೈತ್ರಿಯಿಂದ: used us friendly ನಮ್ಮನ್ನು ಸ್ನೇಹದಿಂದ ಸತ್ಕರಿಸಿದ.