See also 2friend
1friend ಹ್ರೆಂಡ್‍
ನಾಮವಾಚಕ
  1. ಗೆಳೆಯ; ಸ್ನೇಹಿತ; ಮಿತ್ರ; ಸಖ.
  2. ಗೆಳತಿ; ಸ್ನೇಹಿತೆ; ಸಖಿ.
  3. ಪ್ರತಿನಿಧಿ; ನಿಯೋಗಿ; (ಒಬ್ಬನ) ಪರವಾಗಿ ಕಾರ್ಯ ನಡೆಸುವವನು (ಉದಾಹರಣೆಗೆ ದ್ವಂದ್ವಯುದ್ಧದಲ್ಲಿ ದ್ವಿತೀಯ ಯಾ ಸಹಾಯಕ).
  4. (ಸಡಿಲವಾಗಿ) ಪರಿಚಿತ; ಗೆಳೆಯ; ಮಿತ್ರ; ಅಕಸ್ಮಾತ್ತಾಗಿ ಭೇಟಿಯಾದ ಅಪರಿಚಿತನನ್ನು ಯಾ ನೂತನ ಪರಿಚಯದವನನ್ನು ಪ್ರಸ್ತಾಪಿಸುವಾಗ ಬಳಸುವ ವಾಡಿಕೆಯ ಪದ: my friend in the brown hat ಕಂದು ಟೋಪಿಯ ಆ ನನ್ನ ಗೆಳೆಯ.
  5. ಗೆಳೆಯ; ಮಿತ್ರಸ್ನೇಹಿತ:
    1. ಸಂಬೋಧನೆಯಲ್ಲಿ ಮರ್ಯಾದೆಗಾಗಿ ಇಲ್ಲವೆ ವ್ಯಂಗ್ಯವಾಗಿ ಮತ್ತು ಕ್ವೇಕರ್‍ ಪಂಥದವರು ಸಾಮಾನ್ಯ ಸಂಬೋಧನೆಯಾಗಿ ಬಳಸುವ ಪದ.
    2. ಯಾವುದೇ ಹೆಸರಿನ ಹಿಂದೆ ಪ್ರಯೋಗಿಸುವ ಪದ: friend Jones ಗೆಳೆಯ ಜೋನ್ಸ್‍.
    3. (ಬ್ರಿಟಿಷ್‍ ಪ್ರಯೋಗ) ಹೌಸ್‍ ಆಹ್‍ ಕಾಮನ್ಸ್‍ನಲ್ಲಿ ಒಬ್ಬ ಸದಸ್ಯ ಇನ್ನೊಬ್ಬರ ಹೆಸರನ್ನು ಪ್ರಸ್ತಾಪಿಸುವಾಗ ಬಳಸುವ ಪದ: my honourable friend ನನ್ನ ಮಾನ್ಯ ಮಿತ್ರರು.
    4. ನ್ಯಾಯಾಲಯದಲ್ಲಿ ಒಬ್ಬ ವಕೀಲನು ಎದುರು ವಕೀಲನನ್ನು ಪ್ರಸ್ತಾಪಿಸಿ ಹೇಳುವಾಗ ಬಳಸುವ ಪದ: my learned friend ನನ್ನ ವಿದ್ವನ್ಮಿತ್ರರು.
  6. (ಬಹುವಚನದಲ್ಲಿ) ಹತ್ತಿರದ ನಂಟರು; ಸಈಪಬಂಧುಗಳು.
  7. (ಬಹುವಚನದಲ್ಲಿ) (ಒಬ್ಬನ) ಹೊಣೆಗಾರರು; ಜವಾವ್ದಾರಿ, ಹೊಣೆ – ಹೊತ್ತಿರುವವರು. ವಹಿಸಿರುವವರು.
  8. ಹಿತಚಿಂತಕ; ಹಿತೈಷಿ; ಸಹಾನುಭೂತಿಯುಳ್ಳವ.
  9. ಸಮರ್ಥಕ; ಪಕ್ಷಪಾತಿ: no friend of virtue ಗುಣಪಕ್ಷಪಾತಿಯಲ್ಲ.
  10. ಪೋಷಕ; ಆಶ್ರಯದಾತ: a friend at court ರಾಜಸಭೆಯಲ್ಲಿ ಒಬ್ಬನ ಪರವಾಗಿ ಪ್ರಭಾವ ಬೀರಬಲ್ಲ ಪೋಷಕ.
  11. ನೆರವು; ಸಹಾಯಕ(ವಾದಂಥದು): my shyness was here my best friend ನನ್ನ ಸಂಕೋಚವೇ ನನಗಿಲ್ಲಿ ನೆರವಾಯಿತು.
  12. ಶತ್ರುವಲ್ಲದವನು; ಮಿತ್ರ.
  13. ಸ್ವಪಕ್ಷೀಯ; ತನ್ನ ಕಡೆಯವನು; ತನ್ನ ಪಕ್ಷದಲ್ಲೇ, ತನ್ನ ಕಡೆಯೇ – ಇರುವವನು.
  14. (Friend) ಕ್ವೇಕರ್‍; ಕ್ರೈಸ್ತಮತದ ಕ್ವೇಕರ್‍ ಪಂಥದವನು.
  15. (ಸಾಮಾನ್ಯವಾಗಿ ಬಹುವಚನದಲ್ಲಿ) ಪೋಷಕ; ಒಂದು ಸಂಸ್ಥೆಯನ್ನು ಪೋಷಿಸಲು ನಿಯತವಾಗಿ ಹಣ ಸಹಾಯ ಒದಗಿಸುವವನು; the Friends of the Cancer Society ಕ್ಯಾನ್ಸರ್‍ ಸಂಘದ ಪೋಷಕರು.
ಪದಗುಚ್ಛ
  1. be friends (with) ಸ್ನೇಹದಿಂದಿರು.
  2. keep friends (with) ಸ್ನೇಹ ಉಳಿಸಿಕೊ.
  3. make friends (with) ಸ್ನೇಹ ಬೆಳೆಸು; ಸ್ನೇಹ ಮಾಡಿಕೊ.
  4. my honourable friend (ಬ್ರಿಟಿಷ್‍ ಪ್ರಯೋಗ) (ಹೌಸ್‍ ಆಹ್‍ ಕಾಮನ್ಸ್‍ನಲ್ಲಿ ಒಬ್ಬ ಸದಸ್ಯ ಇನ್ನೊಬ್ಬರ ಹೆಸರನ್ನು ಪ್ರಸ್ತಾಪಿಸುವಾಗ ಬಳಸುವ ಪದ) ನನ್ನ ಮಾನ್ಯ ಮಿತ್ರರು.
  5. my learned friend (ನ್ಯಾಯಾಲಯದಲ್ಲಿ ಒಬ್ಬ ವಕೀಲನು ಎದುರು ವಕೀಲನನ್ನು ಪ್ರಸ್ತಾಪಿಸಿ ಹೇಳುವಾಗ ಬಳಸುವ ಪದ) ನನ್ನ ವಿದ್ವನ್ಮಿತ್ರರು.
  6. my noble friend (ಬ್ರಿಟಿಷ್‍ ಪ್ರಯೋಗ) (ಹೌಸ್‍ ಆಹ್‍ ಲಾರ್ಡ್ಸ್‍ನಲ್ಲಿ ಬಳಸುವ ಪದ) ನನ್ನ ಶ್ರೇಷ್ಠ ಮಿತ್ರರು.
  7. Society of Friends (ಕ್ರೈಸ್ತ) ಕ್ವೇಕರರ ಸಂಘ.
See also 1friend
2friend ಹ್ರೆಂಡ್‍
ಸಕರ್ಮಕ ಕ್ರಿಯಾಪದ

(ಕಾವ್ಯಪ್ರಯೋಗ ಯಾ ಪ್ರಾಚೀನ ಪ್ರಯೋಗ)

  1. ಸ್ನೇಹಮಾಡಿಕೊ.
  2. ಸಹಾಯ ಮಾಡು; ನೆರವು ಕೊಡು.