friction ಹ್ರಿಕ್‍ಷನ್‍
ನಾಮವಾಚಕ
  1. (ವೈದ್ಯಕೀಯ ಚಿಕಿತ್ಸೆಯಲ್ಲಿ ಅನುಸರಿಸುವ) ನೀವುವಿಕೆ; ಉಜ್ಜುವಿಕೆ; ತೀಡುವಿಕೆ ; ಮರ್ದನ.
  2. (ಎರಡು ಕಾಯಗಳ) ಉಜ್ಜಾಟ; ತಿಕ್ಕಾಟ; ಘರ್ಷಣ.
  3. (ಭೌತವಿಜ್ಞಾನ, ಯಂತ್ರಶಾಸ್ತ್ರ) ಘರ್ಷಣ; ಒಂದು ಕಾಯದ ಮೇಲೆ ಇನ್ನೊಂದು ಸರಿಯುವಾಗ, ಹರಿಯುವಾಗ ಇಲ್ಲವೆ ಉರುಳುವಾಗ ಎರಡನೆಯ ಕಾಯವು ಎದುರಿಸುವ ನಿರೋಧ.
  4. (ರೂಪಕವಾಗಿ) (ಇಬ್ಬರ ಸಂಕಲ್ಪಗಳು, ಮನೋವೃತ್ತಿಗಳು, ಆಭಿಪ್ರಾಯಗಳು, ಮೊದಲಾದವುಗಳ) ಸಂಘರ್ಷ; ತಿಕ್ಕಾಟ.
ಪದಗುಚ್ಛ

angle of friction ಘರ್ಷಣಕೋನ; ಓರೆಯಾಗಿರುವ ಒಂದು ಕಾಯದ ಮೇಲಿರುವ ಇನ್ನೊಂದು ಕಾಯವು ಸರಿಯದೆ ಇರಲು ಮೊದಲನೆಯದು ಯಾವ ಗರಿಷ್ಠ ಕೋನದಲ್ಲಿ ಇರಬಹುದೋ ಆ ಕೋನ.