frequency ಹ್ರೀಕ್ವನ್ಸಿ
ನಾಮವಾಚಕ
  1. ಆವರ್ತನ; ಬಾರಿ ಬಾರಿಗೆ ಸಂಭವಿಸುವುದು.
  2. ವಾಡಿಕೆಯಂತೆ ಉಂಟಾಗುವುದು.
  3. ಪುನರಾವರ್ತನೆ; ಅಡಿಗಡಿಗೆ, ಮೇಲಿಂದಮೇಲೆ ಬರುವುದು; ಸ್ವಲ್ಪ ಅಂತರದಲ್ಲಿ ಪುನಃಪುನಃ ಬರುವುದು.
  4. (ನಾಡಿಯ) ವೇಗ.
  5. (ಭೌತವಿಜ್ಞಾನ) ಆವರ್ತನ(ದರ); ಕಂಪನ, ಸ್ಪಂದನ, ಆಂದೋಲನ, ಮೊದಲಾದವು ಆಗುವ ದರ; ಒಂದು ಸೆಕೆಂಡಿನಲ್ಲಿ ಆಗುವ ಕಂಪನ ಮೊದಲಾದವುಗಳ ಸಂಖ್ಯೆ: high frequency ಅಧಿಕ ಆವರ್ತನ. medium frequency ಮಧ್ಯಮ ಆವರ್ತನ. low frequency ಕಡಮೆ ಆವರ್ತನ.
  6. (ಸಂಖ್ಯಾಶಾಸ್ತ್ರ) ಆವರ್ತನ; ಸಂಭವ ಪ್ರಮಾಣ; ಯಾವುದೇ ಘಟನೆ ಎಷ್ಟು ಬಾರಿ ನಡೆಯುವುದೋ ಅದಕ್ಕೂ ಆ ಘಟನೆ ಎಷ್ಟು ಬಾರಿ ನಡೆಯುವ ಸಾಧ್ಯತೆ ಇದೆಯೋ ಅದಕ್ಕೂ ಇರುವ ದಾಮಾಷಾ, ಪ್ರಮಾಣ.
ಪದಗುಚ್ಛ

word frequency ಪದಾವರ್ತನ; ಒಂದು ಪದ ಮತ್ತೆ ಮತ್ತೆ ಬರುವುದು.