freezing ಹ್ರೀಸಿಂಗ್‍
ಗುಣವಾಚಕ
  1. (ತಾಪದ ವಿಷಯದಲ್ಲಿ) ಘನೀಕರಿಸುವ; ನೀರ್ಗಲ್ಲಾಗುವ ಯಾ ನೀರ್ಗಲ್ಲಾಗಿಸುವ; ಘನೀಕರಣ ಬಿಂದುವನ್ನು ಮುಟ್ಟುತ್ತಿರುವ, ಮುಟ್ಟಿರುವ ಯಾ ಅದಕ್ಕಿಂತ ಕೆಳಕ್ಕಿಳಿದ.
  2. ವಿಪರೀತ ಶೈತ್ಯದ; ಕೊರೆಯುವ; ಸೆಡೆಯಿಸುವ; ತಡೆಯಲಾರದಷ್ಟು ಯಾ ಅಹಿತವಾದಷ್ಟು ಚಳಿಯ.
  3. (ರೂಪಕವಾಗಿ) (ನಡೆನುಡಿಗಳ ವಿಷಯದಲ್ಲಿ) ಹೃತ್ಪೂರ್ವಕವಲ್ಲದ; ಹಾರ್ದಿಕವಲ್ಲದ; ಭಾವಶೂನ್ಯ; ಉತ್ಸಾಹರಹಿತ: freezing manners ಹಾರ್ದಿಕವಲ್ಲದ ನಡವಳಿಕೆ.
  4. ಹೆಪ್ಪುಗಟ್ಟುತ್ತಿರುವ; ಘನೀಕರಿಸುತ್ತಿರುವ: freezing sea ಹೆಪ್ಪುಗಟ್ಟುತ್ತಿರುವ ಸಮುದ್ರ.