See also 2freeze
1freeze ಹ್ರೀಸ್‍
ಸಕರ್ಮಕ ಕ್ರಿಯಾಪದ
  1. (ತಂಪಿಸಿ) ಗೆಡ್ಡೆ ಕಟ್ಟಿಸು; ಘನೀಕರಿಸು; ಕಲ್ಲಾಗಿಸು; ನೀರ್ಗಲ್ಲಾಗಿಸು; ಹಿಮಗಡ್ಡೆಯಾಗಿಸು.
  2. (ದ್ರವದ ಮೇಲೆ) ನೀರ್ಗಲ್ಲು ಕಟ್ಟಿಸು; ನೀರ್ಗಲ್ಲು ಹೆಪ್ಪುಗಟ್ಟಿಸು; ಪದರ ರಚಿಸು.
  3. (ಆಹಾರ ಮೊದಲಾದವನ್ನು) ಶೀತಾವರಣದಲ್ಲಿಟ್ಟು ಕೆಡದಂತೆ ರಕ್ಷಿಸು.
  4. (ಸಾಲ ಆಸ್ತಿ, ಮೊದಲಾದವನ್ನು ತಾತ್ಕಾಲಿಕವಾಗಿ ಯಾ ಕಾಯಂ ಆಗಿ) ನಿಶ್ಚೇಷ್ಟಗೊಳಿಸು; ನಿಷ್ಕ್ರಿಯಗೊಳಿಸು; ವಸೂಲಾಗದಂತೆ, ಕೊಡದಂತೆ, ವ್ಯವಹಾರ ಮಾಡಲಾಗದಂತೆ, ಉಪಯೋಗಿಸದಂತೆ – ಮಾಡು; ಅಮಾನತ್ತಿನಲ್ಲಿಡು; ಸ್ಥಗಿತಗೊಳಿಸು.
  5. (ಬೆಲೆ, ಮಜೂರಿ, ಮೊದಲಾದವನ್ನು ಏರದಂತೆ) ತಡೆಗಟ್ಟು; ತಡೆಹಿಡಿ: ನಿಲ್ಲಿಸು; ಸ್ಥಗಿತಗೊಳಿಸು.
  6. (ವಿವರಗಳನ್ನು) ನಿರ್ಧರಿಸು; ನಿಷ್ಕರ್ಷಿಸು; ನಿರ್ಣಯಿಸು.
  7. (ಕ್ರಿಯೆಯನ್ನು) ಬೆಳವಣಿಗೆಯ ಯಾವುದೋ ಒಂದು ಹಂತದಲ್ಲಿ ತಡೆಹಿಡಿ, ನಿಲ್ಲಿಸು, ಸ್ಥಗಿತಗೊಳಿಸು.
  8. (ಚಲನಚಿತ್ರ ಮತ್ತು ದೂರದರ್ಶನದಲ್ಲಿ) ಒಂದು ಚಿತ್ರವನ್ನು ಪುನರಾವೃತ್ತಿಗೊಳಿಸುವ ಮೂಲಕ ಚಲನೆಯನ್ನು ನಿಲ್ಲಿಸು, ಸ್ಥಿರೀಕರಿಸು, ಸ್ಥಗಿತಗೊಳಿಸು.
  9. (ಭಾವನೆಗಳನ್ನು) ಕುಂದಿಸು; ನಂದಿಸು; ಉತ್ಸಾಹರಹಿತವಾಗಿ ಮಾಡು.
  10. (ವ್ಯಕ್ತಿಯನ್ನು) ನಿಷ್ಕ್ರಿಯನನ್ನಾಗಿಸು; ನಿಶ್ಶಕ್ತನನ್ನಾಗಿ ಮಾಡು.
  11. (ಶಕ್ತಿಯನ್ನು) ಸ್ಥಂಭಿಸು; ಸ್ತಬ್ಧಗೊಳಿಸು; ನಿಶ್ಚೇಷ್ಟಗೊಳಿಸು.
  12. ಚಳಿಯಿಂದ, ಶೈತ್ಯದಿಂದ
    1. ಸೆಡೆಸು; ಜಡಗೊಳಿಸು.
    2. ಹಾನಿಮಾಡು; ನಾಶಮಾಡು.
    3. ಕೊಲ್ಲು; ಸಾಯಿಸು: frozen to death ಚಳಿಯಿಂದ ಸೆಡೆತು ಸತ್ತ.
  13. (ಶೀತಕದಲ್ಲಿ ಮಾಡುವಂತೆ, ಪದಾರ್ಥವನ್ನು) ಘನೀಕರಿಸುವ ಶೈತ್ಯಕ್ಕೊಳಪಡಿಸು.
  14. ನೀರು ಯಾ ದ್ರವವನ್ನು ಗಡ್ಡೆಕಟ್ಟಿಸಿ (ನಾಳ, ಕೊಳವೆ, ಮೊದಲಾದವುಗಳಲ್ಲಿ) ಅಡಚು.
ಅಕರ್ಮಕ ಕ್ರಿಯಾಪದ
  1. (ಅಕರ್ತೃಕ ಕ್ರಿಯಾಪದವಾಗಿ) ಹಿಮಬೀಳು; ಹಿಮಪಾತವಾಗು: it freezes or it is freezing ಹಿಮ ಬೀಳುತ್ತಿದೆ.
  2. ನೀರ್ಗಲ್ಲಾಗು; ಹಿಮಗಡ್ಡೆಯಾಗು.
  3. (ನದಿ, ಸಮುದ್ರ, ಮೊದಲಾದವುಗಳ ಮೇಲ್ಮೈ) ನೀರ್ಗಲ್ಲಿನಿಂದ ಮುಚ್ಚಿ ಹೋಗು; ಹಿಮಗಡ್ಡೆಯಿಂದ ಆವೃತವಾಗು.
  4. (ಶೈತ್ಯದಿಂದ) ಘನವಾಗು; ಹೆಪ್ಪುಗಟ್ಟು; ಗಡ್ಡೆಕಟ್ಟು; ಕಲ್ಲಾಗು; ಘನೀಭವಿಸು.
  5. (ಚಳಿಯಿಂದ, ಶೈತ್ಯದಿಂದ) ಸೆಡೆದುಕೊ.
  6. ಹಿಮದ ಪರಿಣಾಮವಾಗಿ (ಒಂದಕ್ಕೊಂದು ಯಾ ಪರಸ್ಪರ) ಅಂಟಿಕೊ, ಹತ್ತಿಕೊ.
  7. ಭಯದಿಂದ – ಮೈತಣ್ಣಗಾಗು, ಮೈಸೆಡೆತುಕೊ.
  8. ಹಠಾತ್ತಾಗಿ ನಿಂತುಬಿಡು: fear make him freeze in his tracks ಭಯದಿಂದಾಗಿ ಅವನು ತನ್ನ ಪಥದಲ್ಲಿ ಇದ್ದಕ್ಕಿದ್ದಂತೆ ನಿಂತುಬಿಟ್ಟ.
  9. ಹಿಮದಿಂದ ಯಾ ಚಳಿಯಿಂದ ಸಾಯು.
  10. (ಭಯ, ಆಘಾತ, ಮೊದಲಾದವುಗಳಿಂದ) ನಿಶ್ಚೇಷ್ಟಿತನಾಗು; ನಿಷ್ಕ್ರಿಯನಾಗು: when he got in front of the audience he froze ಸಭಿಕರ ಎದುರಿಗೆ ಬಂದಾಗ ಅವನು ನಿಶ್ಚೇಷ್ಟಿತನಾಗಿ ನಿಂತುಬಿಟ್ಟ.
  11. (ದ್ರವ ಯಾ ನೀರು ಗಡ್ಡೆ ಕಟ್ಟಿದ್ದರಿಂದ ನಾಳ, ಕೊಳವೆ, ಮೊದಲಾದವು) ಅಡಚಿಹೋಗು; ಕಟ್ಟಿಕೊ; ಕಟ್ಟಿಕೊಳ್ಳು.
  12. ಚಳಿಯಾಗು; ಕೊರೆ (ರೂಪಕವಾಗಿ ಸಹ).
ಪದಗುಚ್ಛ
  1. freeze to death ಬಹಳ ಚಳಿಯಿಂದ ಸಾಯು.
  2. freeze up ನೀರ್ಗಲ್ಲಾಗಿಸಿ (ಕೊಳವೆ ಮೊದಲಾದವನ್ನು) ಅಡಚು, ಅಡ್ಡಿಪಡಿಸು.
ನುಡಿಗಟ್ಟು
  1. frozen limit (ಆಡುಮಾತು) ಪರಮಾವಧಿ; ಪರಾಕಾಷ್ಠೆ; ಆಕ್ಷೇಪಾರ್ಹವಾದುದರ ಯಾ ಸಹಿಸಬಹುದಾದುದರ ಕೊನೆಯ ಮಿತಿ, ಅಂತಿಮ ಎಲ್ಲೆ.
  2. freeze one’s blood ರಕ್ತವನ್ನು ಹೆಪ್ಪುಗಟ್ಟಿಸು, ಭಯಭ್ರಾಂತಗೊಳಿಸು; ದಿಗಿಲುಹುಟ್ಟಿಸು; ಸ್ತಂಭೀಭೂತನಾಗಿಸು.
  3. freeze on to (ಅಶಿಷ್ಟ) (ಹಿಡಿದಿರುವ ವ್ಯಕ್ತಿಯನ್ನು ಯಾ ವಸ್ತುವನ್ನು) ಬಿಗಿಯಾಗಿ, ಭದ್ರವಾಗಿ ಹಿಡಿದುಕೊಂಡಿರು. (ವ್ಯಕ್ತಿಗೆ ಯಾ ವಸ್ತುವಿಗೆ) ಬಿಡದೆ ಅಂಟಿಕೊಂಡಿರು.
  4. freeze out (ಅಮೆರಿಕನ್‍ ಪ್ರಯೋಗ, ಅಶಿಷ್ಟ) (ಪೈಪೋಟಿ ವ್ಯವಹಾರ, ಬಹಿಷ್ಕಾರ, ಮೊದಲಾದವುಗಳ ಮೂಲಕ) ವ್ಯಾಪಾರ, ಸಮಾಜ, ಸಂಘ ಮೊದಲಾದವುಗಳಿಂದ – ಹೊರಗೆಹಾಕು, ಹೊರದೂಡು, ಬಹಿಷ್ಕರಿಸು.
See also 1freeze
2freeze ಹ್ರೀಸ್‍
ನಾಮವಾಚಕ
  1. ಹಿಮದ ಸ್ಥಿತಿ.
  2. ಹಿಮದ ಕಾಲ; ಹಿಮಗಾಲ; ಹಿಮಾನಿಲ ಕಾಲ.
  3. (ಬೆಲೆ, ಮಜೂರಿ, ಮೊದಲಾದವುಗಳ) ಸ್ಥಿರೀಕರಣ; ತಡೆಹಿಡಿತ; ಸ್ಥಗನ.
  4. (ಸಿನಿಮಾ ಮತ್ತು ದೂರದರ್ಶನ) ಸ್ಥಗಿತ ಚಿತ್ರ; ಒಂದೇ ಅಭಿನಯವನ್ನು ಹಲವಾರು ಸಲ ಪುನರಾವರ್ತಿಸಿ ಚಲನವನ್ನು ನಿಲ್ಲಿಸಿದ ದೃಶ್ಯ, ಭಾಗ.