freely ಹ್ರೀಲಿ
ಕ್ರಿಯಾವಿಶೇಷಣ
  1. ಸ್ವಇಚ್ಛೆಯಿಂದ; ಸ್ವಪ್ರೇರಣೆಯಿಂದ; ಆತ್ಮ ಸಂತೋಷದಿಂದ: he freely shared his supplies with those around him ಅವನು ತನ್ನ ಸುತ್ತಲೂ ಇದ್ದವರೊಂದಿಗೆ ತನ್ನಲ್ಲಿದ್ದುದನ್ನು ಆತ್ಮ ಸಂತೋಷದಿಂದ ಹಂಚಿಕೊಂಡ.
  2. ಮನಃಪೂರ್ವಕವಾಗಿ; ಮನಸಾರೆ.
  3. ತಾನೇತಾನಾಗಿ; ಪ್ರಯತ್ನವಿಲ್ಲದೆ; ಪ್ರಯತ್ನಪೂರ್ವಕವಾಗಿರದೆ; ಸ್ವತಂತ್ರವಾಗಿ: a freely growing plant ತಾನೇತಾನಾಗಿ ಬೆಳೆಯುವ ಗಿಡ.
  4. ಸಂಕೋಚವಿಲ್ಲದೆ; ಹಿಂಜರಿಕೆಯಿಲ್ಲದೆ.
  5. ಸರಾಗವಾಗಿ; ಸಲೀಸಾಗಿ; ಮುಕ್ತವಾಗಿ; ನಿರ್ಬಂಧರಹಿತವಾಗಿ.
  6. ಧಾರಾಳವಾಗಿ; ಉದಾರವಾಗಿ; ಕೈಹಿಡಿಯದೆ; ಬಿಚ್ಚುಗೈಯಿಂದ: he gave alms freely ಅವನು ಬಿಚ್ಚುಗೈಯಿಂದ ಭಿಕ್ಷೆ ನೀಡಿದ.
  7. (ಮಾತಿನ ವಿಷಯದಲ್ಲಿ) ಮುಚ್ಚುಮರೆಯಿಲ್ಲದೆ; ನೇರವಾಗಿ; ನಿರ್ದಾಕ್ಷಿಣ್ಯವಾಗಿ; ಬಿಚ್ಚುಮನಸ್ಸಿನಿಂದ.
  8. (ಕ್ರಿಯೆಯ ವಿಷಯದಲ್ಲಿ) ಸ್ವತಂತ್ರವಾಗಿ; ಅನಿರ್ಬಂಧವಾಗಿ; ಅಡಚಣೆಯಿಲ್ಲದೆ; ಅಡ್ಡಿಆತಂಕಗಳಿಲ್ಲದೆ; ಎಡರುತೊಡರುಗಳಿಲ್ಲದೆ.
  9. ಸ್ಥೂಲವಾಗಿ; ನಿಯಮ, ಸೂತ್ರ, ಮಾದರಿ, ಸಂಪ್ರದಾಯ, ಮೊದಲಾದವನ್ನು ನಿಷ್ಠುರವಾಗಿ, ಕಟ್ಟುನಿಟ್ಟಾಗಿ ಅನುಸರಿಸದೆ: translate it somewhat freely ಅದನ್ನು ಸ್ವಲ್ಪ ಸ್ಥೂಲವಾಗಿ ಅನುವಾದ ಮಾಡು. the detail is freely executed ವಿವರವನ್ನು ಸ್ಥೂಲವಾಗಿ ನಿರೂಪಿಸಲಾಗಿದೆ, ರಚಿಸಲಾಗಿದೆ.