freedom ಹ್ರೀಡಮ್‍
ನಾಮವಾಚಕ
  1. (ವ್ಯಕ್ತಿ) ಸ್ವಾತಂತ್ರ್ಯ; ಅಪಾರತಂತ್ರ್ಯ; ಅನಧೀನತೆ.
  2. (ನಾಗರಿಕ) ಪ್ರಜಾಸ್ವಾತಂತ್ರ್ಯ; ಸ್ವಾಧೀನತೆ.
  3. ಕಾರ್ಯ ಸ್ವಾತಂತ್ರ್ಯ; ಕ್ರಿಯಾಸ್ವಾತಂತ್ರ್ಯ; (ಏನನ್ನಾದರೂ) ಮಾಡುವ ಹಕ್ಕು.
  4. ಸ್ವಾಯತ್ತತೆ; ತನಗೆ ಸಂಬಂಧಿಸಿದುದನ್ನು ತಾನೇ ನಿರ್ಧರಿಸುವ ಶಕ್ತಿ.
  5. (ವಿಧಿ ಯಾ ನಿಯತಿಗೆ) ಅನಧೀನತೆ.
  6. ನಿಷ್ಕಾಪಟ್ಯ; ಸರಳತೆ; ನಿಸ್ಸಂಕೋಚ; ಖಂಡಿತವಾದಿತ್ವ ಯಾವುದನ್ನೂ ಮರೆಮಾಡದೆ ಹೇಳಿಬಿಡುವುದು.
  7. ಸಲ್ಲದ ಸಲಿಗೆ; ಅತಿ ಸಲುಗೆ.
  8. ಸರಾಗ; ಕಾರ್ಯಸೌಲಭ್ಯ; ಕೆಲಸದಲ್ಲಿ ಚಳಕ.
  9. ಕಲ್ಪನಾ ಸ್ವಾತಂತ್ರ್ಯ; ಕಲ್ಪನೆಯಲ್ಲಿ ಛಾತಿ.
  10. (ಕೊರತೆ, ಅನನುಕೂಲ, ಹೊರೆ, ಕರ್ತವ್ಯ ಮೊದಲಾದವುಗಳಿಂದ) ವಿನಾಯಿತಿ; ಬಿಡುತಿ; ಬಿಡುಗಡೆ; ಅನಿರ್ಬಾಧಿತವಾಗಿರುವುದು; ನಿರುಪಾಧಿಕತೆ.
  11. (ಒಂದು ನಗರ ಯಾ ಪೌರಸಂಸ್ಥೆ ಪಡೆದಿರುವ) ವಿಶೇಷ ಹಕ್ಕು; ವಿಶೇಷಾಧಿಕಾರ.
  12. (ಅನೇಕವೇಳೆ ಪ್ರತಿಷ್ಠಿತ ವ್ಯಕ್ತಿಗಳಿಗೆ ಗೌರವ ಪದವಿಯಾಗಿ ನೀಡುವ)
    1. (ಕಂಪನಿ, ಸಂಘ, ಮೊದಲಾದವುಗಳ) ಗೌರವ ಸದಸ್ಯತ್ವ; ಸದಸ್ಯರು ಸವಲತ್ತುಗಳನ್ನು ಅನುಭವಿಸುವ ಹಕ್ಕು.
    2. (ನಗರದ) ಗೌರವ ಪೌರತ್ವ.
  13. (ಯಾವುದನ್ನೇ) ಉಪಯೋಗಿಸುವ ಸ್ವಾತಂತ್ರ್ಯ: has the freedom of the library ಪುಸ್ತಕ ಭಂಡಾರವನ್ನು ಉಪಯೋಗಿಸಲು ಸ್ವಾತಂತ್ರ್ಯವಿದೆ.
ಪದಗುಚ್ಛ
  1. degree of freedom ಸ್ವಾತಂತ್ರ್ಯಮಾನ:
    1. (ಭೌತವಿಜ್ಞಾನ) (ಸಾಮಾನ್ಯವಾಗಿ ಅಣುಗಳ ವಿಷಯದಲ್ಲಿ) ಚಲನೆಯ ದಿಶೆ, ಭ್ರಮಿಸುವ ಬಗೆ, ಮೊದಲಾದ ವಿವಿಧ ಚಲನೆಗಳಲ್ಲಿ ಒಂದು.
    2. (ರಸಾಯನವಿಜ್ಞಾನ) ರಾಸಾಯನಿಕ ಘಟಕಗಳಲ್ಲಿ ವ್ಯತ್ಯಾಸವಾಗದೆ ಒಟ್ಟು ವ್ಯವಸ್ಥೆಯು ಬದಲಾಯಿಸಬಹುದಾದ ಬಗೆಗಳಲ್ಲೊಂದು.
  2. take freedoms with ಅತಿ ಸಲಿಗೆಯಿಂದ ವರ್ತಿಸು.
  3. the four freedoms ನಾಲ್ಕು ಸ್ವಾತಂತ್ರ್ಯಗಳು; ಚತುಃಸ್ವಾತಂತ್ರ್ಯಗಳು; ಧಾರ್ಮಿಕ ಸ್ವಾತಂತ್ರ್ಯ, ವಾಕ್‍ಸ್ವಾತಂತ್ರ್ಯ, ಜೀವನಾವಶ್ಯಕತೆಗಳ ಅಭಾವವಿಲ್ಲದೆ ಮತ್ತು ಪ್ರಾಣಾಪಾಯದ ಭೀತಿ ಇಲ್ಲದೆ ಜೀವನ ನಡೆಸುವ ಸ್ವಾತಂತ್ರ್ಯಗಳು.