See also 2free  3free
1free ಹ್ರೀ
ಗುಣವಾಚಕ
  1. ಸ್ವತಂತ್ರವಾದ; ಅನಧೀನ; ಅಪರಾಧೀನ; ಅಪರತಂತ್ರ; ಪರಾಧೀನವಲ್ಲದ; ಬೇರೊಬ್ಬರಿಗೆ ಆಳಾಗಿರದ; ವೈಯಕ್ತಿಕ ಹಕ್ಕು ಬಾಧ್ಯತೆಗಳು, ಸಾಮಾಜಿಕ ಹಾಗೂ ರಾಜಕೀಯ ಸ್ವಾತಂತ್ರ್ಯ ಇರುವ.
  2. (ಸಂಸ್ಥೆ, ರಾಷ್ಟ್ರ, ಮೊದಲಾದವುಗಳ ವಿಷಯದಲ್ಲಿ) ಸ್ವಾತಂತ್ರ್ಯವುಳ್ಳ; ಸ್ವತಂತ್ರವಾದ; ಅನಿರ್ಬಂಧಿತ; ಮುಕ್ತ; ಪರರಾಷ್ಟ್ರವೊಂದಕ್ಕೆ ಅಧೀನವಾಗಿ ಯಾ ಸರ್ವಾಧಿಕಾರಿ ಆಡಳಿತಕ್ಕೆ ಒಳಗಾಗಿ ಇರದ; ರಾಷ್ಟ್ರೀಯ ಮತ್ತು ನಾಗರಿಕ ಸ್ವಾತಂತ್ರ್ಯವುಳ್ಳ: free press ಸ್ವತಂತ್ರಪತ್ರಿಕೋದ್ಯಮ.
  3. ಬಿಡಿಯಾದ; ಬಿಡುತೆಯಾದ; ಬಂಧಿತವಲ್ಲದ; ಹೇಗೆಂದರೆ ಹಾಗೆ (ಸುತ್ತಲೂ) ತಿರುಗುವ: free wheel ಹ್ರೀವೀಲು; ಕಾಲೊತ್ತು ತಿರುಗದಿದ್ದರೂ ತಾನು ಸುತ್ತಬಲ್ಲ ಚಕ್ರ.
  4. ನಿರ್ಬಂಧ, ತಡೆ, ಅಡ್ಡಿ, ಅಡಚಣೆ, ಪ್ರತಿಬಂಧಕ, ಅಂಕೆ, ಕಟ್ಟು–ಇಲ್ಲದ; ಸ್ವೇಚ್ಛೆಯಾದ: free love ಸ್ವೇಚ್ಛಾಪ್ರೇಮ; ಮದುವೆಯ ನಿರ್ಬಂಧವಿಲ್ಲದ ಪ್ರೇಮ.
  5. ಸ್ವತಂತ್ರ; ನಿರುಪಾಧಿಕ; ಅನಿರ್ಬಂಧಿತ; ಕಟ್ಟು ಕರ್ತವ್ಯಗಳಿಂದ ವಿಮುಕ್ತವಾದ.
  6. (ಕೆಲಸ ಮಾಡಲು) ಸ್ವತಂತ್ರವಾಗಿರುವ; ನಿರ್ಬಂಧವಿಲ್ಲದ.
  7. ಸಂಕೋಚವಿಲ್ಲದ; ಬಿಂಕವಿಲ್ಲದ; ಬಿಗುಮಾನವಿಲ್ಲದ: free gestures ನಿಸ್ಸಂಕೋಚ ಚರ್ಯೆ, ಚಲನವಲನಗಳು.
  8. (ಸಾಹಿತ್ಯಕ ಶೈಲಿಯ ವಿಷಯದಲ್ಲಿ) ಮುಕ್ತ; ಕಟ್ಟುನಿಟ್ಟಾಗಿರದ; ನಿಷ್ಠುರವಾಗಿ ನಿಯಮಗಳನ್ನು ಪಾಲಿಸದ; ರಚನೆಯಲ್ಲಿ ಯಾವುದೊಂದು ಕಠಿಣಸೂತ್ರಕ್ಕೂ ಒಳಪಡೆದ: free verse ಮುಕ್ತ; ಪದಶಃ, ಅಕ್ಷರಶಃ – ಆಗಿರದ; ಅಕ್ಷಾರಾನುಸಾರವಾಗಿರದ; ಪದಕ್ಕೆ ಪದ ಭಾಷಾಂತರ ಮಾಡದ.
  9. (ಪ್ರಾಚೀನ ಪ್ರಯೋಗ) ಅವಕಾಶವಿರುವ; ಸ್ವಾತಂತ್ರ್ಯವಿರುವ: it is free for (or to) him to do so ಅವನು ಹಾಗೆ ಮಾಡಲು ಅವಕಾಶವುಂಟು.
  10. ಮುಕ್ತ; ಯಾರು ಬೇಕಾದರೂ ಸೇರಿಕೊಳ್ಳಬಹುದಾದ; ಎಲ್ಲರಿಗೂ ಅವಕಾಶವಿರುವ: free fight ಮುಕ್ತ ಹೋರಾಟ; ಇದ್ದಬದ್ದವರೆಲ್ಲಾ ಸೇರಿ ನಡೆಸುವ ಹೊಡೆದಾಟ, ಬಡಿದಾಟ.
  11. ಅಡ್ಡಿ ಆತಂಕವಿಲ್ಲದ; ಅಡೆತಡೆ ಇಲ್ಲದ.
  12. (ಗಾಳಿಯ ವಿಷಯದಲ್ಲಿ) ಅನುಕೂಲವಾದ; ಪ್ರತಿಕೂಲವಲ್ಲದ.
  13. ಮುಕ್ತ:
    1. ಸಂಪರ್ಕವಿಲ್ಲದ.
    2. (ರಸಾಯನವಿಜ್ಞಾನ) ಅಸಂಯುಕ್ತ; ಸಂಯೋಗ ಹೊಂದಿರದ.
    3. (ಶಕ್ತಿಯ ವಿಷಯದಲ್ಲಿ) ಪ್ರಾಪ್ಯ; ಲಭ್ಯ; ದೊರಕಬಹುದಾದ.
    4. (ಭೌತವಿಜ್ಞಾನ) (ಇಲೆಕ್ಟ್ರಾನಿನ ವಿಷಯದಲ್ಲಿ) ಬಂಧಿತವಲ್ಲದ; ಅಣು ಯಾ ಪರಮಾಣುವಿನಲ್ಲಿ ಬಂಧಿತವಾಗದ (ಮತ್ತು ಆ ಕಾರಣದಿಂದಲೇ ವಿದ್ಯುತ್‍ ಹಾಗೂ ಕಾಂತೀಯ ಕ್ಷೇತ್ರಗಳ ಪ್ರಭಾವದಲ್ಲೂ ಅನಿರ್ಬಂಧಿತವಾಗಿ ಚಲಿಸಬಹುದಾದ).
  14. ಗಳಿಸದ; ಬಿಟ್ಟಿ; ಪುಕ್ಕಟೆ; ಉಚಿತ; ಧರ್ಮಾರ್ಥವಾಗಿ ಬಂದ; ದುಡ್ಡಿಲ್ಲದೆ (ಒದಗಿಸಿ) ಕೊಟ್ಟ.
  15. ತಾನೇತಾನಾಗಿ ಬರುವ; ಅಯತ್ನಪೂರ್ವಕ; ಬಲಾತ್ಕಾರವಿಲ್ಲದ; ಸ್ವತಃ ಸಂಭವಿಸುವ.
  16. ಸ್ವಯಂಪ್ರೇರಿತ; ಸ್ವಇಚ್ಛೆಯ; ಮನಃಪೂರ್ವಕವಾದ: the free grace (ದೇವರ) ಸ್ವಯಂಪ್ರೇರಿತ ಪ್ರಸಾದ.
  17. ಅತಿ ಧಾರಾಳದ; ಬಿಚ್ಚುಗೈಯ; ಮುಕ್ತಹಸ್ತ; ಹಿಡಿತವಿಲ್ಲದ; ಉದಾರ; ಪುಷ್ಕಳ; ಯಥೇಚ್ಛ; ನಿರರ್ಗಳ: free of (or with) his money ಹಣದ ವಿಷಯದಲ್ಲಿ ಧಾರಾಳಿ; ಹಿಡಿತವಿಲ್ಲದೆ ವೆಚ್ಚ ಮಾಡುವವನು.
  18. ಮುಚ್ಚುಮರೆಯಿಲ್ಲದ; ನಿಷ್ಕಪಟ; ಸರಳ.
  19. ಸಲೀಸಾದ; ಸರಾಗವಾದ.
  20. (ಆತಿ) ಸಲಿಗೆಯ; (ಸಲ್ಲದ) ಸ್ವಾತಂತ್ರ್ಯವಹಿಸುವ.
  21. ದಾಷ್ಟೀಕದ; ಮುಂದೆ ನುಗ್ಗಿ ಹೋಗುವ.
  22. ಧಾರ್ಷ್ಟ್ಯದ; ಉದ್ಧಟತನದ; ಮರ್ಯಾದೆ ಈರಿ ಹೋಗುವ.
  23. ಅಶ್ಲೀಲ (ಮಾತು, ಕಥೆ, ಮೊದಲಾದವುಗಳಲ್ಲಿ) ಸ್ವಲ್ಪ ಗಂಭೀರವಲ್ಲದ; ಲಜ್ಜೆ, ಮರ್ಯಾದೆ – ಈರಿದ.
  24. ಬಿಡುಗಡೆಯಾದ; ವಿನಾಯಿತಿ ಪಡೆದ; ಮುಕ್ತ: free from the ordinary rules ಸಾಮಾನ್ಯ ನಿಯಮಗಳಿಂದ ವಿನಾಯಿತಿ ಪಡೆದ.
  25. ಮುಕ್ತ; ತೆರಿಗೆ, ಜಕಾತಿ, ಸುಂಕ ವ್ಯಾಪಾರದ ಕಟ್ಟುಪಾಡುಗಳು, ಹೀಸು – ಇವುಗಳಿಂದ ವಿನಾಯಿತಿ ಪಡೆದ; ತೆರಿಗೆ, ಸುಂಕ ಇತ್ಯಾದಿ, ಇಲ್ಲದ.
  26. ಖಾಲಿ ಇರುವ; ಖಾಲಿಯಾಗಿರುವ; ಉಪಯೋಗಿಸದೆ ಇರುವ: the bathroom is free now ಬಚ್ಚಲು ಮನೆ ಈಗ ಖಾಲಿ ಇದೆ.
  27. ಬಿಡುವಿರುವ; ಕೆಲಸಕಾರ್ಯ ಮೊದಲಾದವು ಇಲ್ಲದಿರುವ: are you free on Monday? ನೀನು ಸೋಮವಾರ ಬಿಡುವಾಗಿದ್ದೀಯಾ?
ಪದಗುಚ್ಛ
  1. duty free articles ಸುಂಕವಿಲ್ಲದ ವಸ್ತುಗಳು.
  2. for free (ಅಮೆರಿಕನ್‍ ಪ್ರಯೋಗ) = 1free(15).
  3. free and clear (ನ್ಯಾಯಶಾಸ್ತ್ರ) ಪೂರ್ವಾದಿರಹಿತ; ಭೋಗ್ಯ ಯಾ ಆಧಾರದ ಹೊರೆ ಇಲ್ಲದ; ಅನಿರ್ಬಾಧಿತವಾದ.
  4. free on board, rail, etc. (ಸಾಮಾನು ಸರಕುಗಳ ವಿಷಯದಲ್ಲಿ) ಹಡಗು, ರೈಲು ವ್ಯಾಗನ್ನು, ಮೊದಲಾದವುಗಳಿಗೆ ತಲುಪಿಸಲು ಹಣ, ರುಸುಮು ಕೊಡಬೇಕಾಗಿಲ್ಲದ; ಪುಕ್ಕಟೆ ಬಟವಾಡೆಯ.
  5. free of
    1. ಪ್ರವೇಶದ ಹಾಗೂ ಉಪಯೋಗಿಸುವ ಹಕ್ಕು ಇರುವ: free of the house ಮನೆಗೆ ಪ್ರವೇಶಿಸಿ ಅದರಲ್ಲಿ ವಾಸಿಸುವ ಹಕ್ಕಿರುವ.
    2. ಸಂಸ್ಥೆಯ ಸದಸ್ಯತ್ವದ ಯಾ ನಗರದ ಪೌರತ್ವದ ಹಕ್ಕು ಪಡೆದ: made free of the city ನಗರದ ಪೌರತ್ವ ಪಡೆದ.
  6. make (or be) free (ಸಲ್ಲದ, ಅತಿಯಾದ ಯಾ ಮಿತಿಈರಿದ) ಸಲಿಗೆವಹಿಸು; ಸಲಿಗೆಯಿಂದ ವರ್ತಿಸು.
  7. set free (ಸೆರೆ, ಬಂಧನ, ಹೊಣೆಗಾರಿಕೆ, ಮೊದಲಾದವುಗಳಿಂದ) ಬಿಡುಗಡೆ ಮಾಡು; ವಿಮುಕ್ತಿಗೊಳಿಸು; ಸ್ವತಂತ್ರವಾಗಿಸು.
  8. the Free Churches
    1. ರಾಜ್ಯಸ್ಥಾಪಿತ ಚರ್ಚಿಗೆ ಸೇರದ ಚರ್ಚುಗಳು; ಸ್ವತಂತ್ರ ಚರ್ಚುಗಳು.
    2. ಸ್ವತಂತ್ರ ಧರ್ಮಾನುಯಾಯಿಗಳು.
ನುಡಿಗಟ್ಟು
  1. I am free to confess ನಾನು ಮನಃಪೂರ್ತಿ ಒಪ್ಪಿಕೊಳ್ಳುತ್ತೇನೆ, ಒಪ್ಪಿಕೊಳ್ಳಲು ಸಿದ್ಧನಾಗಿದ್ದೇನೆ.
  2. it’s a free country (ಆಡುಮಾತು) ಸೂಚಿಸಿರುವ ಕಾರ್ಯಾಚರಣೆ ಕಾನೂನುಬಾಹಿರವಲ್ಲ.
See also 1free  3free
2free ಹ್ರೀ
ಕ್ರಿಯಾವಿಶೇಷಣ
  1. ಸ್ವತಂತ್ರವಾಗಿ; ನಿರ್ಬಂಧರಹಿತವಾಗಿ; ಸ್ವೇಚ್ಛೆಯಾಗಿ.
  2. ಬಿಟ್ಟಿಯಾಗಿ; ಪುಕ್ಕಟೆಯಾಗಿ; ಬೆಲೆ ಕೊಡಬೇಕಾಗಿಲ್ಲದೆ.
  3. (ನೌಕಾಯಾನ) (ಹಾಯಿಪಟವನ್ನು) ಉದ್ದುದ್ದವಾಗಿ – ಹಾರಿಸಿ, ಹಾಯಿಸಿ.
See also 1free  2free
3free ಹ್ರೀ
ಸಕರ್ಮಕ ಕ್ರಿಯಾಪದ
  1. (ಸೆರೆ, ಬಂಧನ, ಮೊದಲಾದವುಗಳಿಂದ) ಬಿಡುಗಡೆ ಮಾಡು; ಬಿಟ್ಟುಬಿಡು; ವಿಮುಕ್ತಿಗೊಳಿಸು; ಸ್ವಾತಂತ್ರ್ಯ ಕೊಡು.
  2. ಬಿಡಿಸು; ಪಾರುಮಾಡು: free oneself from debt ಸಾಲದಿಂದ ಬಿಡಿಸಿಕೊ. free the country from oppression ದಬ್ಬಾಳಿಕೆಯಿಂದ ನಾಡನ್ನು ಪಾರುಮಾಡು.
  3. (ತೆರಿಗೆ ಮೊದಲಾದವುಗಳಿಂದ) ಮುಕ್ತಗೊಳಿಸು; ವಿನಾಯಿತಿ ನೀಡು.
  4. (ಹೊರೆ, ಹೊಣೆಯನ್ನು) ಪರಿಹರಿಸು; ಇಲ್ಲದಂತೆ ಮಾಡು; -ಇಂದ ತಪ್ಪಿಸು, ಬಿಡಿಸು: free oneself of responsibility ಹೊಣೆಯಿಂದ ಬಿಡಿಸಿಕೊ.
  5. ಪ್ರತ್ಯೇಕಿಸು; ಬೇರ್ಪಡಿಸು; ಮುಕ್ತವಾಗಿಸು; (ತೊಡಕಿನಿಂದ) ಬಿಡಿಸು: free the telephone line from overhead branches ಮೇಲಿನ ಕೊಂಬೆಗಳಿಂದ ದೂರವಾಣಿ ತಂತಿಯನ್ನು ಬಿಡಿಸು.