fraught ಹ್ರಾಟ್‍
ಗುಣವಾಚಕ
  1. (ಕಾವ್ಯಪ್ರಯೋಗ) ತುಂಬಿದ; ಭರಿತ; ನಿಬಿಡ: ships fraught with precious wares ಬೆಲೆಬಾಳುವ ಸರಕಿನಿಂದ ಭರ್ತಿಯಾದ ಹಡಗುಗಳು.
  2. (ಆಡುಮಾತು) ಕಳವಳಕಾರಿ; ಕಳವಳವನ್ನು ಯಾ ದುಃಖವನ್ನು ಉಂಟುಮಾಡುವ.
  3. ಕಳವಳವನ್ನು ಯಾ ದುಃಖವನ್ನು ಅನುಭವಿಸುತ್ತಿರುವ.
ಪದಗುಚ್ಛ

fraught with

  1. (ಅರ್ಥ ಮೊದಲಾದವುಗಳಿಂದ) ತುಂಬಿದ; ಭರಿತ; ಪೂರ್ಣ: fraught with meaning ಅರ್ಥಪೂರ್ಣವಾದ.
  2. (ಕೇಡು, ಅಪಾಯ, ಭರವಸೆ, ಮೊದಲಾದವುಗಳಿಂದ) ಕೂಡಿದ; (ಕೇಡು ಮೊದಲಾದವನ್ನು) ತರುವ ; ಉಂಟುಮಾಡುವ: fraught with danger ಅಪಾಯಕಾರಿಯಾದ ಯಾ ಅಪಾಯಕರವಾದ. fraught with blessings ಹಾರೈಕೆಗಳಿಂದ ಕೂಡಿದ.