fraud ಹ್ರಾಡ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) ಮೋಸಗಾರಿಕೆ; ವಂಚಿಸುವುದು.
  2. (ದಂಡನಾರ್ಹ) ವಂಚನೆ; ಮೋಸ; ದಗಾ; ಸುಳ್ಳು ನಿರೂಪಣೆ; ಅನುಕೂಲ ಪಡೆಯುವ ಸಲುವಾಗಿ ಸುಳ್ಳು ಕಾಗದಪತ್ರಗಳನ್ನು ಬಳಸುವುದು.
  3. ಕೃತ್ರಿಮೋಪಾಯ; ಕುಟಿಲತಂತ್ರ; ಕುಯುಕ್ತಿ; ಕಪಟ; ಠಕ್ಕು.
  4. ಮೋಸಗಾರ; ಸೋಗಾಳಿ; ಠಕ್ಕ; ನಿರೀಕ್ಷಣೆಗೆ ಯಾ ನೀಡಿದ್ದ ವರ್ಣನೆಗೆ ಸರಿತೂಗದ ವ್ಯಕ್ತಿ.
  5. ಮೋಸ; ನಿರೀಕ್ಷಣೆಗೆ ಯಾ ನೀಡಿದ ವರ್ಣನೆಗೆ ಸರಿತೂಗದ ವಸ್ತು.
ಪದಗುಚ್ಛ
  1. in fraud of (ನ್ಯಾಯಶಾಸ್ತ್ರ) (ಒಬ್ಬನನ್ನು) ಮೋಸಗೊಳಿಸುವುದಕ್ಕಾಗಿ; ವಂಚಿಸುವುದಕ್ಕಾಗಿ.
  2. pious fraud ಧಾರ್ಮಿಕವಂಚನೆ; ಮೋಸಗೊಳಿಸಲ್ಪಟ್ಟವನ ಹಿತಕ್ಕಾಗಿ (ಮುಖ್ಯವಾಗಿ ಅವನ ಧರ್ಮ ಶ್ರದ್ಧೆ ಬಲಪಡಿಸಲು) ಉದ್ದೇಶಿಸಿದ ವಂಚನೆ.