fraternity ಹ್ರಟರ್ನಿಟಿ
ನಾಮವಾಚಕ
  1. ಸೋದರಿಕೆ; ಸೋದರತ್ವ; ಭ್ರಾತೃತ್ವ; ಭ್ರಾತೃಭಾವ; ಸೌದರ್ಯ; ಸೌಭ್ರಾತ್ರ.
  2. ಧಾರ್ಮಿಕ ಬಳಗ; ಒಂದೇ ಧರ್ಮಕ್ಕೆ ಸೇರಿದವರ ಕೂಟ, ಸಂಘ, ಮಂಡಲಿ: the Catholic fraternity ಕ್ಯಾಥೊಲಿಕರ ಮಂಡಲಿ.
  3. ಬಿರಾದಾರಿ; ಸಮಾನ ಉದ್ದೇಶಗಳು, ಹಿತಾಸಕ್ತಿಗಳು, ಮೊದಲಾದವನ್ನು ಹೊಂದಿರುವವರ ಸಂಘ, ಕೂಟ: the medical fraternity ವೈದ್ಯಕೂಟ.
  4. ಸೋದರವರ್ಗ; ಸೌಭ್ರಾತೃಸಂಘ; ಸೋದರ ಕೂಟ; ಒಂದೇ ಕಸುಬು, ವೃತ್ತಿ ಯಾ ವರ್ಗದವರು.
  5. ಸೋದರರು; ಭ್ರಾತೃಗಳು; ಸೋದರಿಕೆಯ ಯಾ ಸೋದರಿಕೆಯಂಥ ಸಂಬಂಧ ಹೊಂದಿರುವವರು.
  6. (ಅಮೆರಿಕನ್‍ ಪ್ರಯೋಗ) ವಿಶ್ವವಿದ್ಯಾನಿಲಯ ಯಾ ಕಾಲೇಜಿನಲ್ಲಿನ ಪುರುಷ ವಿದ್ಯಾರ್ಥಿಸಂಘ.