See also 2frame
1frame ಹ್ರೇಮ್‍
ಸಕರ್ಮಕ ಕ್ರಿಯಾಪದ
  1. (ಒಂದು ಉದ್ದೇಶಕ್ಕೆ, ಕೆಲಸಕ್ಕೆ ಆಲೋಚನೆಗಳನ್ನು, ಕಾರ್ಯಕ್ರಮವನ್ನು, (ಪ್ರಾಚೀನ ಪ್ರಯೋಗ) ಒಬ್ಬ ವ್ಯಕ್ತಿಯನ್ನು) ರೂಪಿಸು; ಆಕಾರ ಕೊಡು; ಅಳವಡಿಸು; ಹೊಂದಿಸು; ನಿಯೋಜಿಸು: frame a reading list for ninth grades ಒಂಬತ್ತನೆಯ ತರಗತಿಯವರಿಗಾಗಿ ಒಂದು ಪಠ್ಯಪಟ್ಟಿ ನಿಯೋಜಿಸು.
  2. ಜೋಡಿಸು; ರಚಿಸು; ಘಟಿಸು.
  3. ಭಾಗಗಳನ್ನು ಜೋಡಿಸಿ ಯಾ ಮಾದರಿಯನ್ನನುಸರಿಸಿ – ತಯಾರಿಸು, ರಚಿಸು, ನಿರ್ಮಿಸು.
  4. (ಸಂಕೀರ್ಣ ಸಾಧನ, ಕಥಾವಸ್ತು, ನಿಯಮ, ಕಥೆ, ತತ್ತ್ವ ಮೊದಲಾದವನ್ನು) ಯೋಜಿಸು; ಕಲ್ಪಿಸು; ರಚನೆ ಮಾಡು; ರಚಿಸು; ಕಟ್ಟು; ಹೇಳು: frame a sentence ವಾಕ್ಯವೊಂದನ್ನು ರಚಿಸು.
  5. (ಮಾತುಗಳನ್ನು) ಉಚ್ಚರಿಸು; ಹೇಳು; ಅನ್ನು: framed a reply in words as flattering as the question ಪ್ರಶ್ನೆಯಷ್ಟೇ ಪ್ರಶಂಸಾತ್ಮಕ ಮಾತುಗಳಲ್ಲಿ ಉತ್ತರವೊಂದನ್ನು ಹೇಳಿದ.
  6. (ಪ್ರಾಚೀನ ಪ್ರಯೋಗ) (ಮನಸ್ಸಿನಲ್ಲಿ) ಭಾವಿಸು; ರೂಪಿಸು; ಕಲ್ಪಿಸು; ಊಹಿಸು.
  7. ಚೌಕಟ್ಟಿನಲ್ಲಿರಿಸು; ಚೌಕಟ್ಟು ಹಾಕು; ಚೌಕಟ್ಟಿನಂತೆ ಆವರಿಸು; ಚೌಕಟ್ಟಾಗಿಸು; ಚೌಕಟ್ಟಿನಂತಿರು: landscape framed in an archway ಕಮಾನುದಾರಿಯು ಚೌಕಟ್ಟಾಗಿರುವ ಭೂದೃಶ್ಯ.
  8. (ಅಶಿಷ್ಟ) (ಯಾರೋ ಒಬ್ಬರ ಮೇಲೆ)
    1. ಸಾಕ್ಷ್ಯ ಯಾ ಸುಳ್ಳು ಆಪಾದನೆ ಸೃಷ್ಟಿಸು.
    2. ಪಿತೂರಿ ನಡೆಸು; ಮಸಲತ್ತು ಮಾಡು.
ಅಕರ್ಮಕ ಕ್ರಿಯಾಪದ

ಬೆಳೆ; ವರ್ಧಿಸು; ವಿಕಾಸವಾಗು; ಅಭಿವೃದ್ಧಿಯಾಗು; ಪ್ರವರ್ಧಮಾನವಾಗುವ ಲಕ್ಷಣ ತೋರು: plans that frame well ಚೆನ್ನಾಗಿ ಅಭಿವೃದ್ಧಿಯಾಗುವ ಯೋಜನೆಗಳು.

ಪದಗುಚ್ಛ

frame up (ಅಮೆರಿಕನ್‍ ಪ್ರಯೋಗ ಅಶಿಷ್ಟ)

  1. ಯಾವುದಾದರೂ ಒಂದು ಘಟನೆ ನಡೆಯುವಂತೆ ದುರುದ್ದೇಶದಿಂದ ಮೊದಲೇ ಸಂಚು ಯಾ ಮಸಲತ್ತು ಮಾಡು.
  2. (ಪಂದ್ಯ, ಚುನಾವಣೆ, ಮೊದಲಾದವುಗಳ) ಫಲಿತಾಂಶವನ್ನು ಸೃಷ್ಟಿಮಾಡು; ಸುಳ್ಳು ಸೃಷ್ಟನೆ ಮಾಡು.
See also 1frame
2frame ಹ್ರೇಮ್‍
ನಾಮವಾಚಕ
  1. (ದೇಹ, ವಾಹನ, ಮೊದಲಾದವುಗಳ) ಕಟ್ಟು; ರಚನೆ; ಜೋಡಣೆ; ಕಟ್ಟಡ; ಬಂಧ.
  2. (ಹಿಂದಿನಿಂದಲೂ ಬಂದ, ರೂಢಿಯಾಗಿ ಬಂದಿರುವ, ಪರಂಪರಾಗತ) ವ್ಯವಸ್ಥೆ; ಕ್ರಮ; ಕಟ್ಟುಪಾಡು: the frame of society ಸಮಾಜದ ವ್ಯವಸ್ಥೆ.
  3. (ಮನಸ್ಸಿನ) ಭಾವ; ತಾತ್ಕಾಲಿಕ ಸ್ಥಿತಿ.
  4. ರಚನೆ; ಕಟ್ಟು; ಕಟ್ಟಡ; ಹಂದರ: the frame of heaven (or earth) ಸ್ವರ್ಗ (ಯಾ ಭೂಮಿಯ) ಕಟ್ಟು, ರಚನೆ.
  5. ಅಂಗರಚನೆ; (ಮನುಷ್ಯನ ಯಾ ಪ್ರಾಣಿಯ) ಮೈಕಟ್ಟು; ಒಡಲು; ದೇಹ; ಆಕಾರ: man of gigantic frame ಭೀಮಕಾಯ; ದೈತ್ಯ; ರಾಕ್ಷಸಾಕಾರದ ಮನುಷ್ಯ.
  6. ಕಟ್ಟಡದ – ಪಂಜರ, ಆಧಾರ.
  7. (ಚಿತ್ರಪಟ, ಗಾಜಿನ ಹಲಗೆ, ಮೊದಲಾದವುಗಳ) ಕಟ್ಟು; ಚೌಕಟ್ಟು.
  8. (ಸೈಕಲ್ಲು, ಕನ್ನಡಕ, ಛತ್ರಿ, ಮೊದಲಾದವುಗಳ) ಪಂಜರ; ಚೌಕಟ್ಟು.
  9. (ಮೋಟಾರುವಾಹನ, ವಿಮಾನ, ಮೊದಲಾದವುಗಳ ದೇಹ, ಎಂಜಿನ್ನು, ಮತ್ತಿತರ ಭಾಗಗಳನ್ನು ಹೊರುವ) ಚೌಕಟ್ಟು; ಆಧಾರ.
  10. (ಚಲನಚಿತ್ರ) (ಹಿಲ್ಮಿನ ಸುರುಳಿಯಲ್ಲಿನ) ಒಂದು ಬಿಡಿಚಿತ್ರ.
  11. (ಟೆಲಿವಿಷನ್‍ನ್ನಿನ) ಪುರ್ಣಬಿಂಬ; ಚೌಕಟ್ಟು; ಟೆಲಿವಿಷನ್ನಿನಲ್ಲಿ ಪ್ರಸಾರವಾಗುವ ಒಂದು ಪೂರ್ಣ ಚಿತ್ರ ಯಾ ಬಿಂಬ.
  12. (ತೋಟಗಾರಿಕೆ) (ಸಸ್ಯಗಳನ್ನು ಹಿಮದಿಂದ ರಕ್ಷಿಸಲು ನಿರ್ಮಿಸುವ) ಗಾಜಿನ – ಪೆಟ್ಟಿಗೆ, ಚೌಕಟ್ಟು.
  13. (ಬ್ರಿಟಿಷ್‍ ಪ್ರಯೋಗ) (ಗಣಿಗಾರಿಕೆ) (ಅದುರು ತೊಳೆಯುವ) ಇಳಿಜಾರು ಹಲಗೆ; ವಾಟದ ಹಲಗೆ; ಓರೆ ಹಲಗೆ.
  14. (ಸ್ನೂಕರ್‍ ಆಟ):
    1. ಚೆಂಡುಗಳನ್ನು ಹೂಡುವ ತ್ರಿಕೋಣಾಕಾರದ ಕಟ್ಟು.
    2. ಹಾಗೆ ಹೂಡಿದ ಚೆಂಡುಗಳು.
    3. ಚೀಲಕ್ಕೆ ಚೆಂಡುಗಳನ್ನು ದೂಡುವ ಆಟದ ಒಂದು ಸುತ್ತು.
  15. (ಅಮೆರಿಕನ್‍ ಪ್ರಯೋಗ, ಅಶಿಷ್ಟ) = frame-up.
  16. ಜೇನುಪೆಟ್ಟಿಗೆ; ಜೇನುಚೌಕಟ್ಟು; ಜೇನುಹುಳುಗಳು ಜೇನುಗೂಡನ್ನು ಕಟ್ಟಲು ಅನುಕೂಲಿಸುವಂತೆ, ಹಾಕಿ ತೆಗೆಯಬಹುದಾದ ಪಟ್ಟಿಗಳುಳ್ಳ ಚೌಕಟ್ಟು.
ಪದಗುಚ್ಛ
  1. frame of mind ಮನಸ್ಸು; ಸದ್ಯದ ಮನೋಭಾವ; ತಾತ್ಕಾಲಿಕ ಮನಃಸ್ಥಿತಿ: in a cheerful frame of mind ಗೆಲುವಿನ ಮನೋಭಾವದಲ್ಲಿ. not in the frame of mind to welcome anyone ಯಾರನ್ನೇ ಸ್ವಾಗತಿಸುವ ಮನಸ್ಸಿನಲ್ಲಿಲ್ಲ.
  2. frame of reference ಆಧಾರ ಚೌಕಟ್ಟು:
    1. (ಭೌತವಿಜ್ಞಾನ) ಭೌತ ವಿದ್ಯಮಾನಗಳ ವೀಕ್ಷಣೆ, ಗಣಿತದ ಸಹಾಯದಿಂದ ಅವುಗಳ ವಿವರಣೆ, ನಿಯಮಗಳ ನಿರೂಪಣೆ, ಮೊದಲಾದವಕ್ಕೆ ಆಧಾರವಾಗಿ ಬಳಸುವ ವೀಕ್ಷಕ ಮತ್ತು ಅವನ ನಿರ್ದೇಶಕ ವ್ಯವಸ್ಥೆ.
    2. ಮಾಹಿತಿ, ಕಲ್ಪನೆ, ಮೊದಲಾದವುಗಳನ್ನು ಒರೆಹಚ್ಚಿ ನೋಡಲು ಬಳಸುವ ಸೈದ್ಧಾಂತಿಕ ಚೌಕಟ್ಟು, ನಡೆನುಡಿಗಳನ್ನು ನಿಯಂತ್ರಿಸುವ ಆಧಾರ ಪ್ರಮಾಣ, ಮೊದಲಾದವು.