fragmentary ಹ್ರಾಗ್ಮಂ(ಗ್ಮೆಂ)ಟರಿ
ಗುಣವಾಚಕ
  1. ಚೂರುಪಾರುಗಳಿಂದ ಕೂಡಿದ; ತುಂಡುಗಳಿಂದ ಕೂಡಿದ.
  2. ಚೂರುಪಾರಾಗಿರುವ; ತುಂಡು ತುಂಡಾದ; ಛಿದ್ರವಾಗಿರುವ; ಶಕಲಿತ.
  3. ಅಸಂಬದ್ಧ; ಒಂದಕ್ಕೊಂದು ಹೊಂದಾಣಿಕೆ ಇಲ್ಲದಿರುವ: gave only a fragmentary account of the incident ಆ ಘಟನೆ ಕುರಿತು ಕೇವಲ ಅಸಂಬದ್ಧ ವರದಿ ಕೊಟ್ಟ.
  4. ಅಪೂರ್ಣ; ಅಸಮಗ್ರ.
  5. ವ್ಯವಸ್ಥೆ ಇಲ್ಲದ; ಗೊತ್ತುಗುರಿ ಇಲ್ಲದ; ಅನಿಶ್ಚಿತ: our approach to the problem is still fragmentary ಆ ವಿಷಯದ ಬಗ್ಗೆ ನಾವು ತಳೆದಿರುವ ನಿಲವು ಇನ್ನೂ ಅನಿಶ್ಚಿತವಾಗಿಯೇ ಇದೆ.
  6. (ಭೂವಿಜ್ಞಾನ) ಶಕಲರಚಿತ; ಶಕಲವಿಶಿಷ್ಟ; ಖಂಡಯುತ; ಖಂಡಮಯ; ಹಿಂದೆ ಇದ್ದ ಶಿಲೆಗಳ ತುಂಡುಗಳಿಂದ ರಚಿತವಾಗಿರುವ.