See also 2fracture
1fracture ಹ್ರಾಕ್‍ಚರ್‍
ನಾಮವಾಚಕ
  1. (ಶಸ್ತ್ರವೈದ್ಯ) ಅಸ್ಥಿಭಂಗ; ಮುಖ್ಯವಾಗಿ ಮೂಳೆಯ ಯಾ ಮೃದ್ವಸ್ಥಿಯ ಮುರಿತ, ಒಡೆತ, ಬಿರಿತ.
  2. (ಖನಿಜಶಾಸ್ತ್ರ) ಭಂಜಿತ, ಛಿನ್ನ – ಮುಖ; ಖನಿಜವನ್ನು ಸುತ್ತಿಗೆಯಿಂದ ಒಡೆದಾಗ ಕಾಣುವ ಮೈ.
  3. (ಭಾಷಾಶಾಸ್ತ್ರ)
    1. ಮುಂದಿನ ವ್ಯಂಜನದ ಪ್ರಭಾವದಿಂದ ಸರಳ ಸ್ವರಸಂಯುಕ್ತಸ್ವರವಾಗುವುದು.
    2. ಇಂಥ ಸಂಯುಕ್ತಸ್ವರ.
See also 1fracture
2fracture ಹ್ರಾಕ್‍ಚರ್‍
ಸಕರ್ಮಕ ಕ್ರಿಯಾಪದ
  1. (ಯಾವುದೇ ಒಂದರಲ್ಲಿ) ಅಸ್ಥಿಭಂಗ ಉಂಟುಮಾಡು.
  2. ಒಡೆ; ಮುರಿ; ಸೀಳು.
  3. (ಅಮೆರಿಕನ್‍ ಪ್ರಯೋಗ, ಅಶಿಷ್ಟ)
    1. ಬಹಳ ವಿನೋದ ಉಂಟುಮಾಡು: ಖುಷಿಪಡಿಸು: this guy Muller fractures me ಈ ಮ್ಯುಲರ್‍ ಅನ್ನುವ ಆಸಾಮಿ ನನ್ನನ್ನು ತುಂಬ ಖುಷಿಪಡಿಸುತ್ತಾನೆ.
    2. ಪ್ರಭಾವಬೀರು; ಪರಿಣಾಮಕಾರಿಯಾಗಿರು.
ಅಕರ್ಮಕ ಕ್ರಿಯಾಪದ
  1. ಅಸ್ಥಿಭಂಗ ಹೊಂದು.
  2. ಒಡೆ; ಮುರಿ; ಸೀಳಾಗು.