fractional ಹ್ರಾಕ್‍ಷನಲ್‍
ಗುಣವಾಚಕ
  1. ಭಿನ್ನರಾಶಿಯ; ಭಿನ್ನರಾಶಿಗೆ ಸಂಬಂಧಿಸಿದ.
  2. ಒಂದು ಅಂಶವನ್ನುಳ್ಳ; ಅಂಶವಾಗಿರುವ; ಅಂಶರೂಪದ; ಅಪೂರ್ಣ; ಅಸಮಗ್ರ.
  3. ಅತ್ಯಲ್ಪ(ಭಾಗದ); ಬಹಳ ಕಡಮೆ ಅಂಶದ: showing only fractional allegiance to his country ತನ್ನ ದೇಶದ ವಿಷಯದಲ್ಲಿ ಕೇವಲ ಅತ್ಯಲ್ಪ ನಿಷ್ಠೆ ತೋರಿಸುತ್ತಾ.
  4. ಸ್ವಲ್ಪ; ಅಲ್ಪ; ಲವ; ಲೇಶ; ಕೊಂಚ: a fraction part of the time allowed ಕೊಟ್ಟಿದ್ದ ಕಾಲದ ಸ್ವಲ್ಪ (ಭಾಗ).
  5. ಅಲ್ಪಾಂಶ ನಾಣ್ಯದ; ಭಿನ್ನರಾಶಿಯ ನಾಣ್ಯದ ಯಾ ನಾಣ್ಯಕ್ಕೆ ಸಂಬಂಧಿಸಿದ: a fractional coin ಭಿನ್ನರಾಶಿಯ ಅಲ್ಪಾಂಶದ ನಾಣ್ಯ.
  6. (ರಸಾಯನವಿಜ್ಞಾನ) ಆಂಶಿಕ: fractional crystallization ಆಂಶಿಕ ಆಸವನ; ಆಂಶಿಕ ಬಟ್ಟಿ ಇಳಿಸುವಿಕೆ; ದ್ರವಮಿಶ್ರಣವೊಂದರ ಘಟಕಗಳ ಕುದಿಬಿಂದುಗಳಿಗಿರುವ ವ್ಯತ್ಯಾಸವನ್ನು ಉಪಯೋಗಿಸಿಕೊಂಡು ಆ ಮಿಶ್ರಣವನ್ನು ನಿಧಾನವಾಗಿ ಕಾಯಿಸಿ ಘಟಕಗಳನ್ನು ಬೇರ್ಪಡಿಸುವುದು.