fraction ಹ್ರಾಕ್‍ಷನ್‍
ನಾಮವಾಚಕ
  1. ವಿಭಾಗಮಾಡುವುದು; ಮುಖ್ಯವಾಗಿ (ಕ್ರೈಸ್ತ) ಪ್ರಭುಭೋಜನದ ಬ್ರೆಡ್ಡನ್ನು ಮುರಿಯುವುದು.
  2. (ಗಣಿತ)
    1. ಅಪೂರ್ಣಾಂಕ; ಅಪೂರ್ಣಸಂಖ್ಯೆ.
    2. ಭಿನ್ನಾಂಕ; ಭಿನ್ನರಾಶಿ; ಅಡ್ಡಗೆರೆಯೊಂದರ ಮೇಲೆ ಅಂಶವೂ ಕೆಳಗೆ ಛೇದವೂ ಇರುವ ಸಂಖ್ಯೆ.
  3. ಪಾಲು; ಭಾಗ; ಅಂಶ; ಕೊಂಚಭಾಗ; ಲವ; ಲೇಶ; ಒಂದುಚೂರು: it is not a fraction ಅದು ಸ್ವಲ್ಪವಲ್ಲ.
  4. ಅಂಶ; ಮಿಶ್ರಣವನ್ನು ಆಸವನ ಮೊದಲಾದ ವಿಧಾನದಿಂದ ಪ್ರತ್ಯೇಕಿಸಿದಾಗ ದೊರೆಯುವ ಭಾಗಗಳಲ್ಲಿ ಯಾವುದೇ ಒಂದು.
ಪದಗುಚ್ಛ
  1. decimal fraction ದಶಮಾಂಶ ಸಂಖ್ಯೆ; ದಶಾಂಶ ಸಂಖ್ಯೆ; ಚುಕ್ಕೆಯ ಮುಂದೆ ಅಂಕಗಳನ್ನಿಟ್ಟು ಬರೆಯುವ ಅಪೂರ್ಣಾಂಕ.
  2. improper fraction ವಿಷಮ ಭಿನ್ನರಾಶಿ; ಛೇದಕ್ಕಿಂತ ಅಂಶ ಹೆಚ್ಚಾಗಿರುವ ಭಿನ್ನರಾಶಿ.
  3. proper fraction ಶುದ್ಧ ಭಿನ್ನರಾಶಿ; ಛೇದಕ್ಕಿಂತ ಅಂಶ ಕಡಮೆ ಇರುವಂಥ ಭಿನ್ನರಾಶಿ.
  4. vulgar fraction = fraction(2b).