foxy ಹಾಕ್ಸಿ
ಗುಣವಾಚಕ
  1. ನರಿಯಂಥ.
  2. ಕಪಟದ; ಕುಯುಕ್ತಿಯ; ಕುತಂತ್ರದ; ತಂತ್ರಿಯಾಗಿ ಕಾಣುವ.
  3. ನರಿಬಣ್ಣದ; ಕೆಂಗಂದುಬಣ್ಣದ.
  4. (ಪ್ರಾಚೀನ ಪ್ರಯೋಗ) (ಚಿತ್ರಣದಲ್ಲಿ) ಅತ್ಯುಜ್ಜ್ವಲವಾದ; (ಬಣ್ಣಹಾಕುವಾಗ) ಮಿತಿಈರಿ ಬಣ್ಣಹಾಕಿದ.
  5. (ಕೊಳೆತ, ತೇವ, ಕಾಡಿಗೆರೋಗ, ಮೊದಲಾದವುಗಳಿಂದ) ಬಣ್ಣಗೆಟ್ಟ; ಕೆಟ್ಟುಹೋದ; ಕಂದಿದ; ಕಂದುತಿರುಗಿದ; ಕಂದಿಹೋದ: this book when it is old and foxy ಈ ಪುಸ್ತಕ ಹಳತಾಗಿ ಕಂದಾದಾಗ.
  6. (ಅಮೆರಿಕನ್‍ ಪ್ರಯೋಗ) (ಅಶಿಷ್ಟ) (ಹೆಂಗಸಿನ ವಿಷಯದಲ್ಲಿ) ಲೈಂಗಿಕ ಆಕರ್ಷಣೆಯುಳ್ಳ.