foundation ಹೌಂಡೇಷನ್‍
ನಾಮವಾಚಕ
  1. ಸ್ಥಾಪನೆ; (ಮುಖ್ಯವಾಗಿ ದತ್ತಿ ಒದಗಿಸಿ) ಸಂಸ್ಥೆಯನ್ನು ಭದ್ರವಾಗಿ ಸ್ಥಾಪಿಸುವುದು.
  2. (ದತ್ತಿ ಬಿಟ್ಟು ಸ್ಥಾಪಿಸಿದ) ಸಂಸ್ಥೆ; ಪ್ರತಿಷ್ಠಾನ (ಉದಾಹರಣೆಗೆ ಮಠ, ಆಶ್ರಮ, ಕಾಲೇಜು, ವೈದ್ಯಶಾಲೆ, ಮೊದಲಾದವು).
  3. ಪಾಯ; ಪಂಚಾಂಗ; ಆಸ್ತಿಭಾರ; ನೆಲಗಟ್ಟು; ಬುನಾದಿ; ಅಡಿಪಾಯ; ತಳಹದಿ.
  4. (ಸಾಮಾನ್ಯವಾಗಿ ಬಹುವಚನದಲ್ಲಿ) ನೆಲಮಾಳಿಗೆ; ನೆಲಮಟ್ಟಕ್ಕಿಂತ ಕೆಳಗೆ ಇರುವ ಕಟ್ಟಡದ ಭಾಗ.
  5. ಆಧಾರ; ಬುಡ; ಒಳಗೆ ಅಡಗಿರುವ ತತ್ತ್ವ: report has no foundation ವರದಿಗೆ ಆಧಾರವಿಲ್ಲ.
  6. ಒಳಗಟ್ಟು; ಹೆಂಗಸಿನ ಉಡುಪಿಗೆ ಆಸರೆ ಕೊಟ್ಟಿರುವ ಒಳ ಉಡುಪು. Figure: foundation
  7. ಆಧಾರ, ಅಡಿ – ಲೇಪ; ಮುಖಕ್ಕೆ ಪೌಡರ್‍ ಮೊದಲಾದ ಪ್ರಸಾಧನ ವಸ್ತುಗಳನ್ನು ಹಾಕುವುದಕ್ಕೆ ಮುಂಚೆ ಹಾಕಿಕೊಳ್ಳುವ ಕೆನೆ ಮೊದಲಾದವು.
ಪದಗುಚ್ಛ
  1. foundation cream = foundation(7).
  2. on the foundation ದತ್ತಿಯ ನಿಧಿ ಯಾ ವರಮಾನದಿಂದ ಪ್ರಯೋಜನ ಪಡೆಯುವ ಹಕ್ಕುಳ್ಳ: if the boy was to be on the foundation (at Eton) ಹುಡುಗ (ಈಟನ್‍ ಕಾಲೇಜಿನ) ನಿಧಿಯ ಉಪಕಾರವನ್ನು ಪಡೆಯಬೇಕಾಗಿದ್ದಿದ್ದರೆ.