See also 2found  3found
1found ಹೌಂಡ್‍
ಸಕರ್ಮಕ ಕ್ರಿಯಾಪದ
  1. (ಕಟ್ಟಡ ಮೊದಲಾದವುಗಳ) ಪಾಯಹಾಕು; ಆಸ್ತಿಭಾರ ಹಾಕು; ನೆಲಗಟ್ಟು ಹಾಕು; ತಳಹದಿ ಹಾಕು: the house had been founded on the rock ಮನೆಯನ್ನು ಬಂಡೆಯ ಆಸ್ತಿಭಾರದ ಮೇಲೆ ಕಟ್ಟಲಾಗಿತ್ತು.
  2. (ಊರು, ಭಾರಿಕಟ್ಟಡ, ಮೊದಲಾದವನ್ನು) ಸ್ಥಾಪನೆ ಮಾಡು; ಕಟ್ಟಲು ತೊಡಗು; ನಿರ್ಮಿಸಲು ಪ್ರಾರಂಭಿಸು.
  3. (ಮುಖ್ಯವಾಗಿ ದತ್ತಿ, ಮಾನ್ಯ, ಮೊದಲಾದವನ್ನು ಬಿಟ್ಟು) ಸ್ಥಾಪಿಸು; ಪ್ರಾರಂಭಿಸು: this school was founded by a bequest ಈ ಶಾಲೆಯು ದತ್ತಿಯಿಂದ ಸ್ಥಾಪನೆಯಾಯಿತು.
  4. (ಸಂಸ್ಥೆಯನ್ನು) ಹುಟ್ಟುಹಾಕು; ಜನ್ಮಕೊಡು; ಮೊದಲುಮಾಡು; ಆರಂಭಿಸು; ಪ್ರವರ್ತನೆ ಮಾಡು.
  5. (ಕಥೆ, ಭಾಗ್ಯ, ವರ್ಗೀಕರಣ, ನಿಯಮ, ಮೊದಲಾದವನ್ನು ಯಾವುದೇ ಆಧಾರ, ತತ್ತ್ವ, ಮೊದಲಾದವುಗಳ ಮೇಲೆ) ಕಟ್ಟು; ನಿಲ್ಲಿಸು; ರಚಿಸು; ಸ್ಥಾಪಿಸು; ಆಧರಿಸು: is founded on justice ನ್ಯಾಯದ ಮೇಲೆ ನಿಂತಿದೆ.
ಅಕರ್ಮಕ ಕ್ರಿಯಾಪದ
  1. ನೆಚ್ಚು; ಆಧರಿಸಿರು.
  2. (ವಾದ ಮೊದಲಾದವುಗಳ ವಿಷಯದಲ್ಲಿ) ಆಧಾರದ ಮೇಲೆ ನಿಂತಿರು; ಆಧಾರ ಹೊಂದಿರು: it must found on belief ಅದು ನಂಬಿಕೆಯನ್ನು ಆಧಾರವುಳ್ಳದ್ದಾಗಿರಬೇಕು.
ಪದಗುಚ್ಛ
  1. founding father ರಾಷ್ಟ್ರಪಿತ; ರಾಷ್ಟ್ರಸ್ಥಾಪಕ; ಅಮೆರಿಕದ ಸ್ವಾತಂತ್ರ್ಯ ಕ್ರಾಂತಿಯಲ್ಲಿ ರಾಷ್ಟ್ರವನ್ನು ಸ್ಥಾಪಿಸಿದ ಮೂಲಪುರುಷರಲ್ಲಿ ಒಬ್ಬ.
  2. ill-founded ನಿರಾಧಾರವಾದ; ಆಧಾರವಿಲ್ಲದ.
  3. well-founded ಸಾಧಾರವಾದ; ಸಕಾರಣವಾದ; ನ್ಯಾಯದ ಆಧಾರವುಳ್ಳ.
See also 1found  3found
2found ಹೌಂಡ್‍
ಸಕರ್ಮಕ ಕ್ರಿಯಾಪದ
  1. (ಲೋಹವನ್ನು) ಕರಗಿಸಿ ಎರಕಹೊಯ್ಯು.
  2. (ಗಾಜಿನ ತಯಾರಿಕೆಗೆ ಸಾಮಗ್ರಿಗಳನ್ನು) ಕರಗಿಸು.
  3. (ಲೋಹದ ಯಾ ಗಾಜಿನ ವಸ್ತುವನ್ನು) ಕರಗಿಸಿ ತಯಾರಿಸು; ಎರಕ ಹೊಯ್ದು ತಯಾರಿಸು.
See also 1found  2found
3found ಹೌಂಡ್‍
ಕ್ರಿಯಾಪದ

find ಧಾತುವಿನ ಭೂತರೂಪ ಮತ್ತು ಭೂತಕೃದಂತ.