fossilize ಹಾಸಿಲೈಸ್‍
ಸಕರ್ಮಕ ಕ್ರಿಯಾಪದ
  1. ಹಾಸಿಲೀಕರಿಸು; ಪಳೆಯುಳಿಕೆಯಾಗಿಸು; ಪಳೆಯುಳಿಕೆಯಾಗಿ ಮಾಡು, ಮಾರ್ಪಡಿಸು.
  2. (ರೂಪಕವಾಗಿ) ಪಳೆಯುಳಿಕೆಯಂತಾಗಿಸು; ಓಬೀರಾಯನ ಕಾಲದ್ದಾಗಿಸು; ಪುರಾತನದ್ದನ್ನಾಗಿ ಮಾಡು; ಬೆಳೆಯುವ ಗುಣವನ್ನು ಕಳೆದುಕೊಳ್ಳುವಂತೆ ಮಾಡು; ಅಭಿವೃದ್ಧಿಗೆ ಅವಕಾಶವಿಲ್ಲದಂತೆ ಮಾಡು: time has fossilized such methods ಕಾಲವು ಅಂಥ ವಿಧಾನಗಳನ್ನು ಓಬೀರಾಯನ ಕಾಲದ್ದಾಗಿಸಿದೆ.
  3. (ವಿರಳ ಪ್ರಯೋಗ) ಪಳೆಯುಳಿಕೆ ರೂಪದಲ್ಲೆಂಬಂತೆ ಉಳಿಸು.
ಅಕರ್ಮಕ ಕ್ರಿಯಾಪದ
  1. ಪಳೆಯುಳಿಕೆಯಾಗು; ಪಳೆಯುಳಿಕೆಯಾಗಿ ಬದಲಾವಣೆಹೊಂದು.
  2. ಪಳೆಯುಳಿಕೆಯಂತಾಗು; ಓಬೀರಾಯನ ಕಾಲದ್ದಾಗು; ಬೆಳೆಯುವ ಗುಣ ಕಳೆದುಕೊಳ್ಳು; ಅಭಿವೃದ್ಧಿಗೆ ಅವಕಾಶವಿಲ್ಲದಂತಾಗು.